ಅಮೆರಿಕದ ಮಿಲಿಟರಿ ಕ್ಯಾಂಪ್‌ಗಳ ಮೇಲಿನ ದಾಳಿಯಲ್ಲಿ ಇರಾನ್‌ ಕೈವಾಡ: ಅಮೆರಿಕ

masthmagaa.com:

ಇರಾಕ್‌ ಹಾಗೂ ಸಿರಿಯಾದಲ್ಲಿನ ಅಮೆರಿಕದ ಮಿಲಿಟರಿ ಕ್ಯಾಂಪ್‌ಗಳ ಮೇಲಿನ ದಾಳಿಗಳಲ್ಲಿ ಇರಾನ್‌ ಕೈವಾಡವಿದೆ ಅಂತ ಅಮೆರಿಕ ಆರೋಪ ಮಾಡಿದೆ. ಈ ರೀತಿಯ ದಾಳಿಗಳು ಇಲ್ಲಿ ಕಾಮನ್‌ ಆದ್ರೂನು, ಇಸ್ರೇಲ್‌ ಪ್ಯಾಲಸ್ತೈನ್‌ ಯುದ್ಧ ಶುರುವಾದ ನಂತರ ದಾಳಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಇರಾನ್‌ ಬೆಂಬಲಿತ ಪ್ರಾಕ್ಸಿ ಗುಂಪುಗಳು ನಿರಂತರವಾಗಿ ರಾಕೆಟ್‌ ಹಾಗೂ ಡ್ರೋನ್‌ ದಾಳಿ ನಡೆಸುತ್ತಿರೋ ಹಿಂದೆ ಇರಾನ್‌ ಕೈವಾಡ ಇದೆ ಅಂತ ವೈಟ್‌ಹೌಸ್‌ ವಕ್ತಾರ ಜಾನ್‌ ಕಿರ್ಬಿ ಆರೋಪಿಸಿದ್ದಾರೆ. “ಕಳೆದ ಕೆಲವು ದಿನಗಳಿಂದ ಇರಾಕ್‌, ಸಿರಿಯಾಗಳಲ್ಲಿ ಇಂತಹ ದಾಳಿಗಳು ಹೆಚ್ಚಾಗ್ತಿವೆ. ಹಮಾಸ್‌, ಹೆಜ್ಬೊಲ್ಲಾಗಳನ್ನ ಸಪೋರ್ಟ್‌ ಮಾಡ್ತಿರೋ ಇರಾನ್‌ ಸರ್ಕಾರ ಹಾಗೂ ಅದರ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್(‌IRGC)ಗಳ ಸಹಾಯದಿಂದ ಈ ದಾಳಿಗಳು ನಡಿತಾ ಇವೆ. ಮುಂಬರುವ ದಿನಗಳಲ್ಲಿ ಇಂತಹ ದಾಳಿಗಳು ಜಾಸ್ತಿಯಾಗೋ ಸಾಧ್ಯತೆಯಿದೆ. ಆದ್ರೆ ಅದ್ರಿಂದ ನಮಗೆ ಆ ಪ್ರಾಂತ್ಯದ ಮೇಲಿರೋ ಇಂಟರೆಸ್ಟ್ ಚೇಂಜ್‌ ಆಗಲ್ಲ. ಇರಾನ್‌ ಆ ಜಾಗದಲ್ಲಿ ಯಾವಾಗಲೂ ಸ್ವಲ್ಪ ಅಸ್ಥಿರತೆ ಇರುವಂತೆ ನೋಡಿಕೊಳ್ಳಲು ಪ್ರಯತ್ನ ಮಾಡುತ್ತೆ. ಆದ್ರೆ ನಾವು ಹಾಗೆ ಮಾಡಲು ಅವರಿಗೆ ಅವಕಾಶ ಕೊಡಲ್ಲ” ಅಂತ ಜಾನ್‌ ಕಿರ್ಬಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply