ನಾಯಿ ಹತ್ಯೆಗೈದ ಟ್ರಂಪ್‌ ರನ್ನಿಂಗ್‌ ಮೇಟ್‌ ಸ್ಪರ್ಧಿಗೆ ಭಾರೀ ವಿರೋಧ!

masthmagaa.com:

ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿರೋ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ರನ್ನಿಂಗ್‌ ಮೇಟ್‌ ಸ್ಪರ್ಧಿ ಆಗಿರೋ ಕ್ರಿಸ್ಟಿ ನೋಯೆಮ್‌ ಇದೀಗ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ತಾವೇ ಬರೆದಿರೋ ಪುಸ್ತಕದಲ್ಲಿ ತಮ್ಮ ನಾಯಿಯನ್ನ ತಮ್ಮ ಕೈಯಾರೇ ಹತ್ಯೆ ಮಾಡಿರೋದಾಗಿ ಈ ಕ್ರಿಸ್ಟಿ ನೋಯೆಮ್‌ ಅವ್ರು ಉಲ್ಲೇಖಿಸಿದ್ದಾರೆ. ಪರಿಣಾಮ ಅಲ್ಲಿನ ಪ್ರಾಣಿ ಪ್ರಿಯರಿಂದ ಹಾಗೂ ರಾಜಕೀಯ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಉಪಾಧ್ಯಕ್ಷರ ರೇಸ್‌ನಲ್ಲಿರೋ ಅಭ್ಯರ್ಥಿಯೊಬ್ರು ಈ ರೀತಿ ಕೃತ್ಯಗಳನ್ನ ನಡೆಸಿರೋದು ತಪ್ಪು ಅಂತ ಸಿಕ್ಕಾಪಟ್ಟೆ ಟೀಕೆಗಳು ಕೇಳಿಬರ್ತಿವೆ.

-masthmagaa.com

Contact Us for Advertisement

Leave a Reply