ಜಗತ್ತು ಮತ್ತೊಂದು ಪ್ಯಾಂಡೆಮಿಕ್‌ಗೆ ಸಿದ್ಧವಾಗಬೇಕು: WHO

masthmagaa.com:

ಜಗತ್ತು ಈಗ ತಾನೆ ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡು ಸಹಜ ಜೀವನದತ್ತ ಮರಳುತ್ತಿದೆ. ಲಾಕ್‌ಡೌನ್‌ ಇಂದ ಬೇಸತ್ತು ಹೋಗಿರೋ ಜನರು ಇವಾಗ ಸೋಷಿಯಲ್‌ ಲೈಫ್‌ನ್ನ ಎಂಜಾಯ್‌ ಮಾಡ್ತಿದಾರೆ. ಆದ್ರೆ ಇದೀಗ ಜಗತ್ತು ಮತ್ತೊಂದು ಪ್ಯಾಂಡೆಮಿಕ್‌ಗೆ ರೆಡಿಯಾಗ್ಬೇಕು ಅಂತ WHO ಎಚ್ಚರಿಸಿದೆ. ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಕೋವಿಡ್‌ ಉಳಿದಿಲ್ಲ. ಹಾಗಂತ ಕೋವಿಡ್‌ನಿಂದ ಆರೋಗ್ಯದ ಮೇಲೆ ಇರುವ ಬೆದರಿಕೆ ಕೊನೆಯಾಗಿದೆ ಅಂತ ಅರ್ಥವಲ್ಲ. ಅಂದ್ರೆ ಕೋವಿಡ್‌ ಸೋಂಕಿನ ಬೆದರಿಕೆ ಇನ್ನೂ ಇದೆ. ರೋಗದ ಹರಡುವಿಕೆ ಹಾಗೂ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಉಂಟು ಮಾಡುವ ಮತ್ತೊಂದು ರೂಪಾಂತರಿ ವೈರಸ್‌ನ ಬೆದರಿಕೆ ಜಗತ್ತಿಗಿದೆ. ಅಲ್ದೆ ಈ ರೂಪಾಂತರಿ ಇನ್ನೂ ಹೆಚ್ಚಿನ ಮಾರಣಾಂತಿಕವಾಗುವ ಸಾಧ್ಯತೆ ತುಂಬಾ ಇದೆ ಅಂತ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಎಚ್ಚರಿಸಿದ್ದಾರೆ. ಜೊತೆಗೆ ಮುಂದಿನ ಪ್ಯಾಂಡೆಮಿಕ್‌ ಬಂದು ಅಪ್ಪಳಿಸಿದಾಗ ನಾವು ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರಿಸಲು ಸಿದ್ಧರಾಗಿರ್ಬೇಕು ಅಂತ ಅಧಾನೊಮ್‌ ಸಲಹೆ ನೀಡಿದ್ದಾರೆ. ಇನ್ನು ಕೋವಿಡ್‌ ಮಹಾಮಾರಿ ಅಪ್ಪಳಿಸಿ 3 ವರ್ಷಗಳ ನಂತರ ಇದೀಗ ಅಧಿಕೃತವಾಗಿ ಕೋವಿಡ್‌ ಎಮರ್ಜನ್ಸಿ ಮುಗಿದಿದೆ. ಆದ್ರೆ ಕೋವಿಡ್‌ನಿಂದ ಉಂಟಾಗುವ ಸಾವುಗಳು ಮಾತ್ರ ಕೊನೆಯಾಗಿಲ್ಲ. ಈಗಲೂ ಜಾಗತಿಕವಾಗಿ ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿ ಕೋವಿಡ್‌ಗೆ ಬಲಿಯಾಗ್ತಿದ್ದಾನೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply