ಭಾರತ ವಿರೋಧಿ ಘೋಷಣೆ: ವಿದ್ಯಾರ್ಥಿಗಳ ಮೇಲಿನ UAPA ಕೇಸ್‌ ಕೈಬಿಟ್ಟ ಕಾಶ್ಮೀರಿ ಪೊಲೀಸ್!‌

masthmagaa.com:

ವಿಶ್ವಕಪ್‌ ಸೋತಿದ್ದಕ್ಕೆ ಭಾರತ ವಿರೋಧಿ ಘೋಷಣೆಗಳನ್ನ ಕೂಗಿ ಸಂಭ್ರಮಾಚರಣೆ ಮಾಡಿದ್ದ 7 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧದ ಕೇಸನ್ನ ಜಮ್ಮು-ಕಾಶ್ಮೀರ ಪೊಲೀಸರು ಕೈ ಬಿಟ್ಟಿದ್ದಾರೆ. ನವೆಂಬರ್‌ 19ರ ವಿಶ್ವಕಪ್‌ ಫೈನಲ್ ಪಂದ್ಯದ ನಂತರ ಶೇರ್-ಇ-ಕಾಶ್ಮೀರ್‌ ಕೃಷಿ ವಿವಿಯ ವಿಧ್ಯಾರ್ಥಿಗಳು‌ ಭಾರತ ವಿರೋಧಿ ಘೋಷಣೆ ಕೂಗಿದ್ರು. ಕಾಶ್ಮೀರಿ ಪೊಲೀಸರು ಅದನ್ನ ಭಯೋತ್ಪಾದಕ ಕೃತ್ಯ ಅಂತ ಪರಿಗಣಿಸಿ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ರು. ಅಲ್ಲದೆ UAPA (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ)ಯಡಿ ಕೇಸ್‌ ದಾಖಲಿಸಿದ್ರು. ಇದೀಗ ಈ 7 ಜನ ವಿದ್ಯಾರ್ಥಿಗಳ ಪೋಷಕರು ಕ್ಷಮೆ ಕೇಳಿ, ಇನ್ಮುಂದೆ ಹೀಗೆ ನಡೆಯದಂತೆ ಎಚ್ಚರ ವಹಿಸ್ತೇವೆ ಅಂತ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಕೇಸನ್ನು ವಾಪಸ್‌ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply