G – 7 ಸಭೆಯಲ್ಲಿ ರಷ್ಯಾಗೆ ಮತ್ತಷ್ಟು ಪೆಟ್ಟು! ಚೀನಾಗೆ ಬ್ರೇಕ್‌ ಹಾಕುತ್ತಾ ನ್ಯಾಟೋ?

masthmagaa.com:

ಮುಂದಿನ ವಾರ G-7 ಅಂದ್ರೆ (ಅಮೆರಿಕ, ಕೆನಡಾ, ಇಟಲಿ, ಫ್ರಾನ್ಸ್‌, UK, ಜರ್ಮನಿ, ಹಾಗೂ ಜಪಾನ್‌) ದೇಶಗಳ ಶೃಂಗಸಭೆ ಜರ್ಮನಿಯಲ್ಲಿ ನಡೆಯಲಿದ್ದು. ಈ ವೇಳೆ ರಷ್ಯಾ ವಿರುದ್ದ ಮತ್ತಷ್ಟು ಕ್ರಮ ತೆಗೆದುಕೊಳ್ಳಲಿದ್ದೇವೆ ಅಂತ ಅಮೆರಿಕದ ಸರ್ಕಾರಿ ಅಧಿಕಾರಿಯೊಬ್ರು ಹೇಳಿಕೆ ನೀಡಿದ್ದಾರೆ. ಈ G-7 ದೇಶಗಳ ಶೃಂಗಸಭೆ ಜೂನ್‌ 26 ರಿಂದ 28 ರವರೆಗೆ ನಡೆಯಲಿದೆ. ಅದಾದ ಬಳಿಕ ನ್ಯಾಟೋ ದೇಶಗಳ ಸಭೆ ಸ್ಪೇನ್‌ನಲ್ಲಿ ಜರುಗಲಿದೆ. ಇಲ್ಲಿ ರಷ್ಯಾ ಜೊತೆಗೆ ಇದೇ ಮೊದಲ ಬಾರಿಗೆ ಚೀನಾವನ್ನ ಕೂಡ ಗಮನವಿಟ್ಟುಕೊಂಡು ಕಾರ್ಯತಂತ್ರ ಹೆಣಿಬೋದು. ಅದರ ಬಗ್ಗೆ ಚರ್ಚೆ ಮಾಡ್ಬೋದು ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply