ಅಗ್ನಿವೀರ್‌ ತರಬೇತಿಯಲ್ಲಿದ್ದ ಯುವತಿ ಆತ್ಮಹತ್ಯೆ! ಆಗಿದ್ದೇನು?

masthmagaa.com:

ಅಗ್ನಿವೀರ್‌ ತರಬೇತಿಯಲ್ಲಿದ್ದ ಕೇರಳ ಮೂಲದ ಯುವತಿಯೊಬ್ರು ಮುಂಬೈನ ನೇವಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ವರ್ಷದ ಇವರು ಬೇಸಿಕ್‌ ಟ್ರೈನಿಂಗ್ ಮುಗಿಸಿ ಸದ್ಯ ಅಲ್ಲಿನ ʻಮಲಾಡ್‌ʼ ಬಳಿ ಇದ್ದ INS ಹಮ್ಲಾ ಯುದ್ಧನೌಕೆಯಲ್ಲಿ ತರಬೇತಿ ಪಡೀತಿದ್ರು ಅಂತ ಪೊಲೀಸರು ಹೇಳಿದ್ದಾರೆ. ʻವೈಯಕ್ತಿಕ ಕಾರಣಗಳಿಂದ ಮನನೊಂದು ಇವರು ಈ ನಿರ್ಧಾರಕ್ಕೆ ಬಂದಿರ್ಬೋದು. ಘಟನಾ ಸ್ಥಳದಲ್ಲಿ ಯುವತಿ ಬರೆದಿಟ್ಟ ಯಾವುದೇ ಪತ್ರ ಸಿಕ್ಕಿಲ್ಲ. ಈ ಬಗ್ಗೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗ್ತಿದೆʼ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply