ಮಿಸ್‌ ಯೂನಿವರ್ಸ್‌ ಸ್ಪರ್ಧಿಗಳಿಗೆ ಲೈಂಗಿಕ ದೌರ್ಜನ್ಯ! ಆಯೋಜಕರ ವಿರುದ್ಧ ದೂರು ನೀಡಿದ ಯುವತಿಯರು!

masthmagaa.com:

ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸ್ಪರ್ಧೆಯ 5 ಸ್ಪರ್ಧಿಗಳು ತಮ್ಮನ್ನ ಟಾಪ್‌ಲೆಸ್ ಆಗಿ ದೇಹ ತಪಾಸಣೆಗೆ ಒಳಪಡಿಸಲಾಗಿದೆ ಅಂತ ಆಯೋಜಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಇಂಡೋನೇಷ್ಯಾ ಪ್ರತಿನಿಧಿಸುವ ಸ್ಪರ್ಧಿಗಳನ್ನ ಆಯ್ಕೆ ಮಾಡಲು ಜುಲೈ 29 ರಿಂದ ಆಗಸ್ಟ್ 3 ರವರೆಗೆ ಜಕಾರ್ತಾದಲ್ಲಿ ಮಿಸ್​ ಇಂಡೋನೇಷ್ಯಾದ ಸೌಂದರ್ಯ ಸ್ಪರ್ಧೆ ನಡೆಸಲಾಗಿತ್ತು. ಈ ವೇಳೆ ಪುರುಷರು ಸೇರಿದಂತೆ 20ಕ್ಕೂ ಹೆಚ್ಚು ಜನರು ಒಂದೇ ಕೋಣೆಯಲ್ಲಿ ಇದ್ದರು. ಆಗ ದೈಹಿಕ ಪರೀಕ್ಷೆಗಾಗಿ ತಮ್ಮ ಒಳ ಉಡುಪುಗಳನ್ನು ತೆಗೆದುಹಾಕಲು ಸಂಘಟಕರು ಸ್ಪರ್ಧಿಗಳನ್ನ ಕೇಳಿದ್ದಾರೆ ಅಂತ ಯುವತಿಯರು ಆರೋಪಿಸಿದ್ದಾರೆ. ಇತ್ತ ಮಿಸ್ ಯೂನಿವರ್ಸ್ ಆರ್ಗನೈಸೇಷನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪಗಳ ಬಗ್ಗೆ ಸಂತ್ರಸ್ತೆಯರಿಂದ ಮಾಹಿತಿ ಪಡೆದುಕೊಂಡಿದೇವೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply