ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣಕ್ಕೆ ಮೊಬೈಲಲ್ಲೇ ಆಧಾರ್‌ ತೋರಿಸಿದ್ರೆ ಸಾಕು

masthmagaa.com:

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಆಧಾರ್‌ ಕಾರ್ಡ್‌ನ ಹಾರ್ಡ್ ಕಾಪಿ ಇರಲೇಬೇಕು ಅಂತೇನಿಲ್ಲ. ಬದಲಾಗಿ ಫೋನ್​​ನಲ್ಲಿ ಡಿಜಿಲಾಕರ್ ಆ್ಯಪ್ ಮೂಲಕ ಆಧಾರ್‌ ತೋರಿಸಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಕಟಣೆ ಹೊರಡಿಸಿದೆ. ಅಂದ್ಹಾಗೆ ಮಹಿಳಾ ಪ್ರಯಾಣಿಕರು ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ತಮ್ಮ ಐಡಿಗಳನ್ನು ತೋರಿಸಲು ಅವಕಾಶವಿದ್ದರೂ, ಅನೇಕ ಕಂಡಕ್ಟರ್‌ಗಳು ಅದನ್ನು ತಿರಸ್ಕರಿಸುತ್ತಿದ್ದಾರೆ ಅಂತ ದೂರು ಬರ್ತಿವೆ. ಈ ಕಾರಣಕ್ಕೆ ಇನ್ಮುಂದೆ ಡಿಜಿಲಾಕರ್‌ನಲ್ಲಿನ ಐಡಿ ತೋರಿಸಿದ್ರೆ ಸ್ವೀಕರಿಸಬೇಕು ಅಂತ ಸೂಚನೆ ನೀಡಲಾಗಿದೆ ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply