ಸಂಸತ್ತು ಹಾಗೂ ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತೆ: ಉಪರಾಷ್ಟ್ರಪತಿ

masthmagaa.com:

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಲು ಶೀಘ್ರದಲ್ಲೇ ತಿದ್ದುಪಡಿ ಮಾಡಲಾಗುತ್ತೆ ಅಂತ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹೇಳಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತಾಡಿರುವ ಧನ್‌ಕರ್‌, ಸಂಸತ್ತು ಹಾಗೂ ಅಸೆಂಬ್ಲಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗೋ ದಿನಗಳು ತುಂಬಾ ದೂರವೇನಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಲು ಸಂವಿಧಾನಕ್ಕೆ ತಿದ್ದುಪಡಿತರಲಾಗುತ್ತೆ. ಇದ್ರಿಂದ ಭಾರತ 2047ರಷ್ಟರಲ್ಲಿ ಗ್ಲೋಬಲ್‌ ಪವರ್‌ ಆಗಿಲಿದೆ. ಆದ್ರೆ ರಿಸರ್ವೇಶನ್‌ ಏನಾದ್ರೂ ಆದಷ್ಟು ಬೇಗ ಸಿಕ್ರೆ 2047ಕ್ಕಿಂತ ಮೊದಲೇ ಭಾರತ ನಂಬರ್‌ ಒನ್‌ ದೇಶವಾಗಲಿದೆ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ಸಂವಿಧಾನದ ತಿದ್ದುಪಡಿಯನ್ನ ಬುಹಶಃ ಸಂಸತ್ತು ಕರೆದಿರೋ ವಿಶೇಷ ಅಧಿವೇಶನಲ್ಲಿ ಮಾಡ್ಬೋದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply