ತಾಲಿಬಾನ್‌ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರು! ಯಾಕೆ?

masthmagaa.com:

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಬ್ಯೂಟಿ ಸಲೂನ್‌ಗಳನ್ನ ಬ್ಯಾನ್‌ ಮಾಡಿ ಆದೇಶ ಹೊರಡಿಸಿದ್ದ ತಾಲಿಬಾನ್‌ ನಿರ್ಧಾರವನ್ನ ವಿರೋಧಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಅಫ್ಘಾನಿಸ್ತಾನವನ್ನ ತಾಲಿಬಾನ್‌ ವಶಪಡಿಸ್ಕೊಂಡ್ಮೇಲೆ ಅಲ್ಲಿನ ಮಹಿಳೆಯರ ಎಲ್ಲಾ ರೀತಿಯ ಹಕ್ಕನ್ನ ದಮನ ಮಾಡಲಾಗ್ತಿದೆ. ಅಲ್ದೆ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ಪ್ರತಿಭಟನೆಗಳು ತುಂಬಾ ಅಪರೂಪವಾಗಿದ್ದು, ಸುಮಾರು 50 ಜನ ಮಹಿಳೆಯರು ಒಂದೆಡೆ ಸೇರಿ ನಮ್ಮ ನೀರು ಆಹಾರವನ್ನ ಕಸಿದುಕೊಳ್ಬೇಡಿ ಅಂತ ಪ್ರತಿಭಟನೆ ನಡೆಸಿದ್ದಾರೆ. ಕೆಲವರಿಗೆ ಮನೆ ನಡೆಸಲು ಇರೋ ಏಕೈಕ ಆದಾಯದ ಮೂಲ ಅಂದ್ರೆ ಬ್ಯೂಟಿ ಸಲೂನ್‌ ಈಗ ಅದನ್ನೂ ಬ್ಯಾನ್‌ ಮಾಡಿದ್ರೆ ನಾವೇನ್‌ ಮಾಡ್ಬೇಕು. ಹೀಗಾಗಿ ನಮಗೆ ನ್ಯಾಯ ಬೇಕು ಅಂತ ಆಗ್ರಹಿಸಿದ್ದಾರೆ. ಜೊತೆಗೆ ನಾವಿಲ್ಲಿ ಮಾತುಕತೆ ನಡೆಸೋಕೆ ಬಂದಿದ್ದು, ನಮ್ಮ ಮಾತು ಕೇಳಲು ಯಾರು ಬಂದಿಲ್ಲ. ಆದ್ರೆ ನಮ್ಮನ್ನ ಚದುರಿಸೋಕೆ ಜಲಫಿರಂಗಿ, ಗುಂಡುಗಳನ್ನ ಹಾರಿಸುತ್ತಿದ್ದಾರೆ ಅಂತ ಪ್ರತಿಭಟನಾಕರರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply