ಸಿಂಧೂ ಜಲ ವಿವಾದಲ್ಲಿ ವಿಶ್ವ ಬ್ಯಾಂಕ್‌ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ! ಹೇಳಿದ್ಯಾರು?

masthmagaa.com:

ಭಾರತ ಮತ್ತು ಪಾಕಿಸ್ತಾನ ನಡುವೆ ಇರೋ ಸಿಂಧೂ ಜಲ ಒಪ್ಪಂದದ ವಿವಾದವನ್ನ ಪರಿಹರಿಸೋಕೆ ವಿಶ್ವ ಬ್ಯಾಂಕ್‌ ಮುಂದಾಗಿರೋದನ್ನ ಭಾರತ ವಿರೋಧಿಸಿದೆ. ಉಭಯ ದೇಶಗಳಿಗೆ ಸಂಬಂಧಿಸಿರೋ ಈ ಒಪ್ಪಂದದ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ತೀವಿ. ಇದ್ರಲ್ಲಿ ಮಧ್ಯ ಪ್ರವೇಶಿಸೋ ಸ್ಥಾನದಲ್ಲಿ ವಿಶ್ವ ಬ್ಯಾಂಕ್‌ ಇದೆ ಅಂತ ನಮಗೆ ಅನ್ನಿಸೋಲ್ಲ. ಈ ವಿಚಾರದಲ್ಲಿ ಭಾರತದ ನಿಲುವು ಚೇಂಜ್‌ ಆಗಲ್ಲ ಹಾಗೂ ವರ್ಲ್ಡ್‌ ಬ್ಯಾಂಕ್‌ನ ನಿಲುವು ಚೇಂಜ್‌ ಆಗಿದ್ಯೋ ಇಲ್ವೋ ನಮಗೆ ಗೊತ್ತಿಲ್ಲ. ವಿಶ್ವ ಬ್ಯಾಂಕ್‌ ನೇಮಕ ಮಾಡಿರೋ ಮಧ್ಯಸ್ಥಿಕೆ ಕೋರ್ಟ್‌ನ್ನ ನಾವು ರಿಜೆಕ್ಟ್‌ ಮಾಡ್ತೀವಿ ಅಂತ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಬಗ್ಚಿ ಹೇಳಿದ್ದಾರೆ. ಇತ್ತೀಚೆಗೆ ಸಿಂಧೂ ಜಲ ಒಪ್ಪಂದದ ವಿವಾದವನ್ನ ಬಗೆಹರಿಸೋಕೆ ಅಂತ ಓರ್ವ ತಜ್ಞ ಹಾಗೂ ಮಧ್ಯಸ್ಥಿಕೆ ಕೋರ್ಟ್‌ನ್ನ ನೇಮಕ ಮಾಡೋದಾಗಿ ವಿಶ್ವ ಬ್ಯಾಂಕ್‌ ಅನೌನ್ಸ್‌ ಮಾಡಿತ್ತು. ಇದಾದ ನಂತ್ರ ಸಿಂಧೂ ಜಲ ಒಪ್ಪಂದದಲ್ಲಿ ಕೆಲವು ಬದಲಾವಣೆ ಮಾಡೋಕೆ ಮಾತುಕತೆಗೆ ಬನ್ನಿ ಅಂತ ಭಾರತ, ಪಾಕಿಸ್ತಾನಕ್ಕೆ 90 ದಿನಗಳ ಗಡುವು ನೀಡಿ ನೋಟಿಸ್‌ ಜಾರಿ ಮಾಡಿತ್ತು.ಈ ಹಿನ್ನಲೆಯಲ್ಲಿ ಭಾರತ ಈ ರೀತಿ ಹೇಳಿದೆ.

-masthmagaa.com

Contact Us for Advertisement

Leave a Reply