ವಿರಾಟ್‌ ಕೊಹ್ಲಿ ಹುಟ್ಟು ಹಬ್ಬಕ್ಕೆ ವಿಶೇಷ ತಯಾರಿ ಈಡನ್‌ ಗಾರ್ಡನ್‌ನಲ್ಲಿ! ಏನದು?

masthmagaa.com:

ಭಾರತ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿಯವರು ನವೆಂಬರ್ 5ರಂದು ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ಆಡಲಿದೆ. ಈ ಹಿನ್ನಲೆಯಲ್ಲಿ ಕೊಹ್ಲಿಯವರಿಗೆ ಚಿಯರ್‌ ಮಾಡಲು ಮೈದಾನಕ್ಕೆ ಬರುವ 70 ಸಾವಿರ ಅಭಿಮಾನಿಗಳಿಗೆ ಉಚಿತವಾಗಿ ʻವಿರಾಟ್‌ ಕೊಹ್ಲಿ ಮಾಸ್ಕ್‌ʼ ವಿತರಿಸೋಕೆ ನಿರ್ಧರಿಸಲಾಗಿದೆ. ‘ವಿರಾಟ್ ಕೊಹ್ಲಿ ಮೈದಾನಕ್ಕೆ ನಡೆದು ಬರುವಾಗ ಕ್ರೀಡಾಂಗಣದಲ್ಲಿರುವ ಪ್ರತಿಯೊಬ್ಬ ಅಭಿಮಾನಿ ಕೊಹ್ಲಿ ಮಾಸ್ಕ್ ಧರಿಸಬೇಕು ಅನ್ನೋದು ನಮ್ಮ ಆಶಯವಾಗಿದೆ. ಅದಕ್ಕಾಗಿ ನಾವು ಈ ತಯಾರಿ ಮಾಡಿಕೊಂಡಿದ್ದು, ಇದಕ್ಕೆ ICC ಒಪ್ಪಿಗೆ ಸಿಗುವ ವಿಶ್ವಾಸವಿದೆ ಅಂತ ಪಶ್ಚಿಮ ಬಂಗಾಳ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಸ್ನೇಹಸಿಶ್‌ ಗಂಗೂಲಿ ಹೇಳಿದ್ದಾರೆ. ಉಚಿತವಾಗಿ 70 ಸಾವಿರ ಮಾಸ್ಕ್ ವಿತರಣೆಗೆ ನಿರ್ಧರಿಸಿದ್ದೇವೆ’ ಎಂದೂ ಅವರು ಹೇಳಿದರು.

-masthmagaa.com

Contact Us for Advertisement

Leave a Reply