ರಶ್ದಿ ಮೇಲಿನ ದಾಳಿ ಕುರಿತು ಇರಾನ್‌, ಅಮೆರಿಕ ಹೇಳಿದ್ದೇನು?

masthmagaa.com:

ಇತ್ತೀಚಿಗಷ್ಟೇ ಭಾರತೀಯ ಮೂಲದ‌ ಬ್ರಿಟಿಷ್ ಲೇಖಕ ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆದಿತ್ತು. ಇದೀಗ ಈ ಬಗ್ಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಾತಾಡಿದ್ದಾರೆ. ಅವ್ರು, ಜನರು ತಮ್ಮ ಐಡಿಯಾಗಳನ್ನ ಯಾವುದೇ ಭಯವಿಲ್ದೇ ಹಂಚಿಕೊಳ್ಳುವಂತಿರಬೇಕು. ಸಮಾಜದಲ್ಲಿ ಹಿಂಸೆ ಮತ್ತು ದ್ವೇಷಕ್ಕೆ ಸ್ಥಾನವಿಲ್ಲ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ರಶ್ದಿ ಅವ್ರ ಮೇಲೆ ಕೊಲೆ ಪ್ರಯತ್ನ ಮಾಡಿದ್ದ ಆರೋಪಿಯ ತಂದೆ ತಮ್ಮ ಮನೆಯಲ್ಲಿ ತಮ್ಮನ್ನ ತಾವು ಲಾಕ್‌ ಮಾಡಿಕೊಂಡಿದ್ದಾರೆ. ಅಲ್ದೇ ಯಾರ ಜೊತೆಗೂ ಕೂಡ ಮಾತಾಡ್ತಿಲ್ಲ ಅಂತ ಹೇಳಲಾಗ್ತಿದೆ. ಇತ್ತ‌ ರಶ್ದಿ ಅವರ ಮೇಲಿನ ದಾಳಿಗೆ ಅವ್ರ ಬೆಂಬಲಿಗರನ್ನ ಆರೋಪಿಸಬೇಕು ಅಂತ ಇರಾನ್ ಹೇಳಿದೆ. ಹಾಗೂ ರಶ್ದಿ ಅವರ ಬರವಣಿಗೆಯಲ್ಲಿ ಅವ್ರು ಮಾಡಿದ ಧರ್ಮದ ಮೇಲಿನ ಅವಮಾನಗಳನ್ನ ವಾಕ್ ಸ್ವಾತಂತ್ರ್ಯ ಸಮರ್ಥಿಸಲ್ಲ ಅಂತ ಇರಾನ್‌ನ ವಿದೇಶಾಂಗ ವಕ್ತಾರ ನಸ್ಸಾರ್‌ ಕನಾನಿ ಕಿಡಿಕಾರಿದ್ದಾರೆ. ಜೊತೆಗೆ ಮಾಧ್ಯಮದಲ್ಲಿ ಎಷ್ಟು ಸುದ್ದಿ ಬಂದಿದೆಯೊ ಅದರ ಹೊರತಾಗಿ ಹೆಚ್ಚಿನ ಮಾಹಿತಿ ನಮ್ಮ ಬಳಿಯಿಲ್ಲ ಅಂತ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply