ಹಿಮಗಡ್ಡೆ ಕರಗಿ ರಷ್ಯಾ ಮತ್ತು ಕಝಾಕಿಸ್ತಾನದಲ್ಲಿ ಪ್ರವಾಹ!

masthamagaa.com:

ಹಿಮಗಡ್ಡೆ ಕರಗಿದ ಪರಿಣಾಮ ಇದೀಗ ರಷ್ಯಾ ಮತ್ತು ಪಕ್ಕದ ಕಝಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಜನರನ್ನ ಸೇಫ್‌ ಜಾಗಕ್ಕೆ ಸ್ಥಳಾಂತರಿಸಲು ರಷ್ಯಾ ಮತ್ತು ಕಝಾಕಿಸ್ತಾನ ಆದೇಶ ಹೊರಡಿಸಿದೆ. ಕಝಾಕಿಸ್ತಾನದ ಉರಲ್‌ ಪರ್ವತ ಪ್ರದೇಶಗಳಲ್ಲಿ ನೂರಾರು ಸೆಟಲ್‌ಮೆಂಟ್‌ಗಳಿಗೆ ಪ್ರವಾಹದಿಂದ ಹಾನಿ ಉಂಟಾಗಿದೆ. ಸೈಬೀರಿಯಾ ಮತ್ತು ಸುತ್ತಮುತ್ತಲ ಏರಿಯಾಗಳಿಗೂ ಭಾರಿ ಪರಿಣಾಮ ಬೀರಿದೆ. ಅಲ್ಲಿನ ಉರಲ್‌ ಮತ್ತು ಟೋಬೋಲ್‌ಗಳಂತಹ ಪ್ರಮುಖ ನದಿಗಳು ಕೂಡ ಉಕ್ಕಿ ಹರೀತಿವೆ. ನೀರಿನ ರಭಸದಿಂದ ಅಲ್ಲಿನ ಒಂದು ಅಣೆಕಟ್ಟು ಕೂಡ ಒಡೆದು ಹೋಗಿ….ಹತ್ತಿರದ ನಗರಗಳಿಗೆ ನೀರು ನುಗ್ಗಿದೆ. ಅಂದ್ಹಾಗೆ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಭಯ ದೇಶಗಳು ಇಂತಹ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿರೋದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply