ಡಿಸೆಂಬರ್‌ 9ಕ್ಕೆ WPL ಹರಾಜು ಪ್ರಕ್ರಿಯೆ!

masthmagaa.com:

ವುಮನ್ಸ್ ಪ್ರೀಮಿಯರ್‌ ಲೀಗ್‌ನ ಹರಾಜು ಪ್ರಕ್ರಿಯೆ ಡಿಸೆಂಬರ್‌ 9ಕ್ಕೆ ನಡೆಯಲಿದ್ದು, ಎಲ್ಲ ಫ್ರಾಂಚೈಸ್‌ಗಳು ಕೈಬಿಟ್ಟ ಹಾಗೂ ಉಳಿಸಿ ಕೊಳ್ಳುವ ಆಟಗಾರರ ಪಟ್ಟಿ ಘೋಷಿಸಿವೆ. ಕಳೆದ ಬಾರಿ ಅತಿ ಹೆಚ್ಚಿನ ಮೊತ್ತಕ್ಕೆ ಟೀಮ್‌ ಇಂಡಿಯಾ ಸ್ಟಾರ್‌ ಆಟಗಾರ್ತಿ ಸ್ಮೃತಿ ಮಂದನಾರನ್ನ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿತ್ತು. ಈ ವರ್ಷವೂ ಮಂದನಾರನ್ನ ಉಳಿಸಿಕೊಂಡಿದೆ. ಮೆಗ್‌ ಲ್ಯಾನಿಂಗ್‌ರನ್ನ ದೆಹಲಿ , ಹರ್ಮನ್‌ ಪ್ರೀತ್‌ ಕೌರ್‌ರನ್ನ ಮುಂಬೈ, ಹರ್ಲೀನ್‌ ಡಿಯೋಲ್‌ರನ್ನ ಗುಜರಾತ್‌ ಟೀಮ್‌ಗಳು ಉಳಿಸಿಕೊಂಡಿವೆ. ಇನ್ನು ತಂಡಗಳು ಕೈಬಿಟ್ಟ ಪ್ಲೇಯರ್‌ಗಳನ್ನ ಖರೀದಿಸಲು WPLನ್ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಡಿಸೆಂಬರ್‌ 9 ರಂದು ನಡೆಯಲಿದೆ.

-masthmagaa.com

Contact Us for Advertisement

Leave a Reply