ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ..ಕುಸ್ತಿಪಟುಗಳ ಹೋರಾಟ ತೀವ್ರ!

masthmagaa.com:

ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ಮುಂದುವರೆದಿದೆ. ಫೆಡರೇಷನ್‌ ಚೀಫ್‌ ಮತ್ತು ಹಲವು ಕೋಚ್‌ಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿ ಪ್ರತಿಭಟನೆ ಮಾಡಲಾಗ್ತಿದೆ. ಸರ್ಕಾರದ ಪರವಾಗಿ ಮಾತುಕತೆಗೆ ಬಂದಿದ್ದ ಬಬಿತಾ ಪೋಗಟ್‌, ನಾನು ಕೂಡ ಕುಸ್ತಿಪಟುವಾಗಿದ್ದು ಈಗ ಸರ್ಕಾರದಲ್ಲಿದ್ದೇನೆ. ಸರ್ಕಾರ ಕುಸ್ತಿಪಟುಗಳ ಜೊತೆಗಿದೆ ಅಂತ ಹೇಳಿದ್ದಾರೆ. ನನ್ನ ವೃತ್ತಿ ಜೀವನದಲ್ಲೂ ಈ ತರಹದ ಕಿರುಕುಳದ ಉದಾಹರಣೆಗಳನ್ನ ಕೇಳಿದ್ದೇನೆ.. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಅಂತ ಬಬಿತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಕುಸ್ತಿಪಟು ಬಜರಂಗ್‌ ಪುನಿಯಾ, ಸರ್ಕಾರ ಕೇವಲ ಭರವಸೆಯನ್ನ ನೀಡುತ್ತೆ. ಯಾವುದೇ ಕ್ರಮ ಕೈಗೊಂಡಿಲ್ಲ.. ನಮ್ಮ ಬೇಡಿಕೆ ಈಡೇರೋವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಅಂತ ಹೇಳಿದ್ದಾರೆ. ಜೊತೆಗೆ ಫೆಡರೇಷನ್‌ನ ಚೀಫ್‌ ಬ್ರಿಜ್‌ ಭೂಷಣ್‌ ರಾಜೀನಾಮೆ ನೀಡಿ ಜೈಲಿಗೆ ಹೋಗೋ ತರ ಮಾಡೇ ಮಾಡ್ತೀವಿ. ನಾಳೆಯೂ ಸಹ ಧರಣಿ ಮುಂದುವರೆಯಲಿದ್ದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವ್ರು ಬರೋವರೆಗು ಕಾಯುತ್ತೇವೆ ಅಂತ ವಿನೇಶ್‌ ಪೋಗಟ್‌ ಹೇಳಿದ್ದಾರೆ. ಇದ್ರ ನಡುವೆಯೇ ಸರ್ಕಾರ ಬ್ರಿಜ್‌ ಭೂಷಣ್‌ ಅವರನ್ನ ಹುದ್ದೆಯಿಂದ ತೆಗೆದುಹಾಕೋಕೆ ಸಿದ್ದತೆ ನಡೆಸ್ತಿದೆ ಅಂತ ಹೇಳಲಾಗ್ತಿದೆ.

masthmagaa.com

Contact Us for Advertisement

Leave a Reply