ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ!

masthmagaa.com:

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ WFI ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌, ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಅಂತ ಹೇಳಿದ್ದಾರೆ. ಹುದ್ದೆಗೆ ರಾಜೀನಾಮೆ ನೀಡುವುದು ದೊಡ್ಡ ವಿಷಯವಲ್ಲ. ಆದ್ರೆ ನಾನು ಹಾಗೆ ಮಾಡೋದಿಲ್ಲ. ಯಾಕಂದ್ರೆ ನಾನು ಕ್ರಿಮಿನಲ್‌ ಅಲ್ಲ. ಕುಸ್ತಿಪಟುಗಳ ಬೇಡಿಕೆ ಆಗಾಗ ಬದಲಾಗ್ತಿದೆ. ಮೊದಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೇಳಿದ್ರು. ಒಂದು ವೇಳೆ ನಾನು ರಾಜೀನಾಮೆ ನೀಡಿದ್ರೆ ನನ್ನ ಮೇಲಿನ ಆರೋಪ ಒಪ್ಪಿಕೊಂಡಂತೆ ಅಂತ ಹೇಳಿದ್ದಾರೆ. ಇತ್ತ ಕುಸ್ತಿಪಟುಗಳಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ಪ್ರಿಯಾಂಕ, ಎಫ್‌ಐಆರ್‌ ದಾಖಲಾದ್ರೂ ಅದರ ಪ್ರತಿಯನ್ನ ನೀಡದಿದ್ದಕ್ಕೆ ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದ್‌ ಕಡೆ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್‌ ಮಂತರ್‌ ಬಳಿ ವಿದ್ಯುತ್‌, ಆಹಾರ ಹಾಗೂ ನೀರಿನ ಸಪ್ಲೈಯನ್ನ ಕಟ್‌ ಮಾಡಲಾಗಿದೆ ಅಂತ ಕುಸ್ತಿಪಟು ಬಜರಂಗ್‌ ಪುನಿಯಾ ಆರೋಪಿಸಿದ್ದಾರೆ. ಮತ್ತೊಂದ್‌ ಕಡೆ ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರು ತಮ್ಮ ಬೆಂಬಲ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply