ನೆದರ್ಲ್ಯಾಂಡ್‌ ಸಮುದ್ರದಲ್ಲಿ 2ನೇ ಮಹಾಯುದ್ದದ ಅವಶೇಷಗಳು ಪತ್ತೆ!

masthmagaa.com:

2ನೇ ಮಹಾಯುದ್ದದ ವೇಳೆ ನೆದರ್ಲ್ಯಾಂಡ್‌ ಸಮುದ್ರದಲ್ಲಿ ಜರ್ಮನ್ನರು ಹೊಡೆದುರುಳಿಸಿದ್ದ ವಿಮಾನದ ಅವಶೇಷಗಳು ಈಗ ಪತ್ತೆಯಾಗಿವೆ ಅಂತ ನೆದರ್‌ಲ್ಯಾಂಡ್‌ ರಕ್ಷಣಾ ಸಚಿವಾಲಯ ತಿಳಿಸಿದೆ. ಬ್ರಿಟಿನ್‌ನ ಏರ್‌ಫೋರ್ಸ್‌ ಅಧಿಕಾರಿಗಳಾದ ಅರ್ಥುರ್‌ ಸ್ಮಾರ್ಟ್‌, ರೈಮಂಡ್‌ ಮೂರೆ ಹಾಗೂ ಚಾರ್ಲ್ಸ್‌ ಸ್ಪ್ರಾಕ್‌ರ ಅವಶೇಷಗಳು ಪತ್ತೆಯಾಗಿವೆ. 80ವರ್ಷದ ಹಿಂದೆ ನೆದರಲ್ಯಾಂಡ್‌ ಜಲ ದುರಂತದಲ್ಲಿನ ಅವಶೇಷಗಳು ಈಗಲೂ ಪತ್ತೆಯಾಗಿರೋದು ಆಶ್ಚರ್ಯಕಾರಿ ಸಂಗತಿಯಾಗಿದೆ. 27ವರ್ಷದ ಇಂಜಿನಿಯರ್ ಸ್ಮಾರ್ಟ್‌ ಮತ್ತು 21ವರ್ಷದ ವೈರ್‌ಲೆಸ್‌ ಆಪರೇಟರ್‌ ಮೂರೆಯವರ ಮೊದಲಕ್ಷರಗಳಿರೋ ಎರಡು ಬೆಳ್ಳಿ ಲೇಪಿತ ಸಿಗರೇಟ್‌ ಕೇಸ್‌ಗಳು ಪತ್ತೆಯಾಗಿವೆ. ಶವಗಳನ್ನ ಸ್ಟಾವರೀನ್‌, ವರ್ಕಮ್‌ ಮತ್ತು ಇಂಡೆಲೂಪೆನ್‌ನಿಂದ ತೊಳೆದು ಸಮಾಧಿ ಮಾಡಲಾಗಿದೆ. ಅಂದಹಾಗೆ 1943 ಜೂನ್‌ 13ರಂದು ಜರ್ಮನಿಯ ಬೋಚುಮ್‌ನ್ನ ಗುರಿಯಾಗಿಸಿ ಹೊರಟಿದ್ದ ಮಿಷನ್ ಲ್ಯಾಂಕ್‌ಕಾಸ್ಟರ್‌ ಬಾಂಬರ್‌ನನ್ನ ಪಾಥ್‌ ಫೈಂಡರ್‌ ಟ್ರ್ಯಾಕ್‌ ಮಾಡೋ ಬದಲು ಯುಸೇಲ್‌ಮೀರ್‌ನ ನೆದರ್‌ಲ್ಯಾಂಡ್‌ ನೀರಿನಲ್ಲಿ 7 ಜನರಿದ್ದ ವಿಮಾನವನ್ನ ಹೊಡೆದುರುಳಿಸಲಾಗಿತ್ತು.

-masthmagaa.com

Contact Us for Advertisement

Leave a Reply