ಟ್ವಿಟರ್‌ ಕಂಪನಿ ಮೇಲಿದ್ದ X ಲೋಗೋ ಎತ್ತಂಗಡಿ! ಯಾಕೆ?

masthmagaa.com:

ಇತ್ತೀಚೆಗೆ ಟ್ವಿಟರ್‌ ಲೋಗೋ ನೀಲಿಹಕ್ಕಿ ತೆಗೆದು ಆ ಜಾಗದಲ್ಲಿ X ಹಾಕಿ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಭಾರಿ ಸುದ್ಧಿ ಮಾಡಿದ್ರು. ಇದೀಗ ಇದರ ವಿರುದ್ಧ ದೂರು ಹಾಗೂ ಟೀಕೆಗಳು ಕೇಳಿ ಬಂದಿವೆ. ಅಷ್ಟೇ ಅಲ್ಲ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಹೆಡ್‌ಕ್ವಾರ್ಟರ್ಸ್‌ ಮೇಲೆ ಹಾಕಲಾಗಿದ್ದ ದೊಡ್ಡ X ಚಿಹ್ನೆಯನ್ನ ತೆರವು ಮಾಡಲಾಗಿದೆ. ರಾತ್ರಿವೇಳೆ ಈ X ಚಿಹ್ನೆಯಿಂದ ಫ್ಲಾಶ್‌ ಲೈಟ್‌ ಎಮಿಟ್‌ ಆಗ್ತಿರೋದ್ರ ಬಗ್ಗೆ ನೆರೆಹೊರೆಯ ಜನರು ಕಂಪ್ಲೇಂಟ್‌ ಮಾಡಿದ್ರು. ಈ ಹಿನ್ನಲೆಯಲ್ಲಿ X ಬೋರ್ಡ್‌ ಅನ್ನ ತೆಗದು ಹಾಕಲಾಗಿದೆ. ಆದ್ರೆ ಟ್ವಿಟರ್‌ ಮಾತ್ರ ಇದಕ್ಕೆ ಬೇರೆಯದ್ದೇ ಕಾರಣ ಕೊಟ್ಟಿದೆ. X ಚಿಹ್ನೆಯನ್ನ ನಾವು ಸ್ವಯಂಪ್ರೇರಿತವಾಗಿ ತೆಗೆದು ಹಾಕಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply