ಹಲವು ವರ್ಷಗಳ ನಂತರ ಶಿನ್‌ಜಿಯಾಂಗ್‌ ಪ್ರಾಂತ್ಯಕ್ಕೆ ಭೇಟಿ ನೀಡಿದ ಚೀನಾದ ದೊರೆ ಜಿನ್‌ಪಿಂಗ್!

masthmagaa.com:

ಹಲವು ವರ್ಷಗಳ ನಂತರ ಮೊದಲ ಬಾರಿಗೆ ಚೀನಾದ ಸರ್ವಾಧಿಕಾರಿ ಶಿ ಜಿನ್‌ಪಿಂಗ್ ಅಲ್ಲಿನ ಶಿನ್‌ಜಿಯಾಂಗ್‌ ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾರೆ. ಅಂದ್ಹಾಗೆ ಈ ಶಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಗೋರ್‌ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಚೀನಾ ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸುತ್ತೆ. ಈ ಪ್ರಾಂತ್ಯದಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡ್ತಿದೆ ಅಂತ ಇಡೀ ವಿಶ್ವಸಮುದಾಯ ಆರೋಪಿಸುತ್ತಲೇ ಬರ್ತಿದೆ. ಪಾಶ್ಚೀಮಾತ್ಯ ದೇಶಗಳಂತೂ ಚೀನಾದ ಕ್ರಮಗಳನ್ನ ʻನರಮೇಧʼ ಅಂತ ಕರೆದಿವೆ. ಆದ್ರೆ ಚೀನಾ ಮಾತ್ರ ಎಲ್ಲ ಅರೋಪಗಳನ್ನ ತಳ್ಳಿ ಹಾಕ್ತಾ ಬಂದಿದೆ. ಇನ್ನು ಬುಧವಾರದ ಭೇಟಿ ವೇಳೆ ಮಾತಾಡಿರೋ ಜಿನ್‌ಪಿಂಗ್‌, ʻ ಈ ಭಾಗದಲ್ಲಿ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ಮಹಾನ್ ಪ್ರಗತಿಯನ್ನ ಸಾಧಿಸಲಾಗಿದೆʼ ಅಂತ ಹೇಳಿದ್ದಾರೆ. ಜೊತೆಗೆ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply