ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹಾಗೂ ಜಪಾನ್‌ ಪ್ರಧಾನಿ ಕಿಶಿದಾ ಭೇಟಿ!

masthmagaa.com:

ಫುಕುಶಿಮಾ ವೇಸ್ಟ್‌ವಾಟರ್‌ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಹಾಗೂ ಜಪಾನ್‌ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಜಪಾನ್‌ ಪ್ರಧಾನಿ ಪುಮಿಯೋ ಕಿಶಿದಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ APEC ಸಮಿಟ್‌ನಲ್ಲಿ ಮೀಟ್‌ ಮಾಡಿದ್ದಾರೆ. ಈ ವೇಳೆ ಚೀನಾದಲ್ಲಿ ಬ್ಯಾನ್‌ ಆದ ಜಪಾನಿನ ಸಮುದ್ರ ಆಹಾರ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಬಳಿಕ ಮಾತಾಡಿರೋ ಜಿನ್‌ಪಿಂಗ್‌, ಉಭಯ ರಾಷ್ಟ್ರಗಳು ಪರಸ್ಪರ ಪ್ರಯೋಜನಕಾರಿ ಲಾಭದಾಯಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡ್ತಿವೆ ಅಂತ ಹೇಳಿದ್ದಾರೆ. ಇನ್ನು ಮೀಟಿಂಗ್‌ ಬಳಿಕ ಚೀನಾದಲ್ಲಿ ಜಪಾನ್‌ ಸಮುದ್ರಹಾರದ ಮೇಲೆ ಹೇರಲಾಗಿರೋ ಬ್ಯಾನ್‌ನ್ನ ಕೈಬಿಡುವಂತೆ ಕಿಶಿದಾರವರು ಒತ್ತಾಯಿಸಿದ್ದಾರೆ. ಈ ವೇಳೆ ಜಪಾನ್‌ ಕೂಡ ಪುಕುಶಿಮಾ ನೀರು ವಿವಾದವನ್ನ ಸಮಾಲೋಚನೆಯೊಂದಿಗೆ ಬಗೆಹರಿಸಿಕೊಳ್ಳಬೇಕು ಅಂತ ಜಿನ್‌ಪಿಂಗ್‌ ಹೇಳಿದ್ದಾರೆ.

masthmagaa.com

Contact Us for Advertisement

Leave a Reply