ಚೀನಾದ ವ್ಯಾಕ್ಸಿನ್‌ಗಳು ಕೋವಿಡ್‌ ಮೇಲೆ ಪಾರಿಣಾಮಕಾರಿಯಾಗಿಲ್ಲ! ಹೇಳಿದ್ಯಾರು?

masthmagaa.com:

ಚೀನಾದಲ್ಲಿ ಕೋವಿಡ್‌ ಕೇಸ್‌ಗಳು ದಿನೇ ದಿನೇ ಹೆಚ್ಚಾಗ್ತಾ ಇವೆ. ಅಲ್ಲಿನ ಜನ ಸರ್ಕಾರದ ಕಠಿಣ ಕ್ರಮಗಳನ್ನ ವಿರೋಧಿಸಿ ಪ್ರತಿಭಟನೆ ಮಾಡ್ತಾನೇ ಇದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ರೂ ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌ ಮಾತ್ರ ಪಾಶ್ಚಿಮಾತ್ಯ ದೇಶಗಳಿಂದ ವ್ಯಾಕ್ಸಿನ್‌ಗಳನ್ನ ತಗೋಳಕೆ ರೆಡಿ ಆಗ್ತಿಲ್ಲ. ಚೀನಾದಲ್ಲೇ ತಯಾರಿಸಲಾದ ವ್ಯಾಕ್ಸಿನ್‌ಗಳ ಮೇಲೆ ಡಿಪೆಂಡ್‌ ಆಗಿದ್ದಾರೆ. ಆದ್ರೆ ಆ ವ್ಯಾಕ್ಸಿನ್‌ಗಳು ಕೋವಿಡ್‌ ಮೇಲೆ ಅಷ್ಟೇನು ಪರಿಣಾಮಕಾರಿಯಾಗಿ ಕೆಲ್ಸ ಮಾಡಲ್ಲ ಅಂತ ಅಮೆರಿಕ ಹೇಳಿದೆ. ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಹಿಂಜರಿತದಂತ ತೊಂದ್ರೆಗಳಿಂದ ಬೇಸತ್ತ ಜನ ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಇದ್ರಿಂದ ಕಮ್ಯುನಿಸ್ಟ್‌ ಪಾರ್ಟಿ ಆಡಳಿತಕ್ಕೆ ಏನು ಬೆದರಿಕೆ ಇಲ್ದೇ ಇರ್ಬೋದು. ಆದ್ರೆ ಜಿನ್‌ಪಿಂಗ್‌ರ ವೈಯಕ್ತಿಕ ವಿಚಾರಗಳ ಮೇಲೆ ಪರಿಣಾಮ ಬೀಳೊ ಸಾಧ್ಯತೆ ಇದೆ ಅಂತ ಅಮೆರಿಕದ ಇಂಟಲಿಜೆನ್ಸ್‌ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದರೆಲ್ಲರ ನಡುವೆ ಆ್ಯಪಲ್‌ ಕಂಪನಿ ತನ್ನ ತಯಾರಿಕಾ ಘಟಕವನ್ನ ಚೀನಾದಿಂದ ಸ್ಥಳಾಂತರ ಮಾಡೋಕೆ ಪ್ಲಾನ್‌ ಮಾಡ್ತಿದೆ. ಏಷ್ಯಾದ ದೇಶಗಳಲ್ಲಿ ಅದ್ರಲ್ಲೂ ಮುಖ್ಯವಾಗಿ ಭಾರತ ಮತ್ತು ವಿಯೆಟ್ನಾಂನಲ್ಲಿ ಫ್ಯಾಕ್ಟರಿಯನ್ನ ತೆರೆಯೋಕೆ ಮುಂದಾಗಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಇತ್ತೀಚೆಗೆ ಚೀನಾದಲ್ಲಿರೋ ಆ್ಯಪಲ್‌ನ ಫಾಕ್ಸ್‌ಕಾನ್‌ ಫ್ಯಾಕ್ಟರಿಯಲ್ಲಿನ ಉದ್ಯೋಗಿಗಳು ಪ್ರತಿಭಟನೆ ಮಾಡಿದ್ರು, ಈ ಹಿನ್ನಲೆಯಲ್ಲಿ ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply