ಮದುವೆ, ಮಕ್ಕಳು, ಕುಟುಂಬಗಳ ಬಗ್ಗೆ ಜಿನ್‌ಪಿಂಗ್‌ ಪಾಠ!

masthmagaa.com

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜಿಯೊಪಾಲಿಟಿಕ್ಸ್‌ ಮೂಡ್‌ನಿಂದ ಫ್ಯಾಮಿಲಿ ಮೂಡ್‌ಗೆ ಹೋಗಿದ್ದಾರೆ. ಚೀನಾ ಬರ್ತ್‌ರೇಟ್‌ ಕುಸೀತಾ ಇರೋ ಕಾಲದಲ್ಲಿ, “ಮಹಿಳೆಯರ ಅಭಿವೃದ್ಧಿ ಅಂದ್ರೆ ಬರಿ ಕೆಲಸದಲ್ಲಿ ಆಗೋ ಅಭಿವೃದ್ಧಿ ಅಲ್ಲ. ಅದ್ರ ಜೊತೆಗೆ ಮಹಿಳೆಯರು ಒಳ್ಳೆಯ ಮದುವೆ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಮಕ್ಕಳನ್ನ ಹೆರೋದರ ಜೊತೆಗೆ, ಅವರಲ್ಲೂ ಸಹ ಮದುವೆ, ಮಕ್ಕಳು, ಕುಟುಂಬಗಳ ವ್ಯಾಲ್ಯೂಗಳನ್ನ ತುಂಬುವಂತ ಕೆಲಸ ಮಾಡ್ಬೇಕು. ಕುಟುಂಬದಲ್ಲಿ ಸಾಮರಸ್ಯ ಇದ್ರೆ ಅದ್ರಿಂದ ಸಮಾಜದಲ್ಲಿ ಸಾಮರಸ್ಯ ಬರುತ್ತೆ. ಸಮಾಜದ ಸಾಮರಸ್ಯ ದೇಶದ ಅಭಿವೃದ್ಧಿಗೆ, ಬೆಳವಣಿಗೆಗೆ ಕೊಡುಗೆ ನೀಡುತ್ತೆ” ಅಂದಿದಾರೆ. ಅಂದ್ಹಾಗೆ ಚೀನಾ ಮಹಿಳಾ ಒಕ್ಕೂಟದ ಕಾರ್ಯಕ್ರಮ ಒಂದ್ರಲ್ಲಿ ಜಿನ್‌ಪಿಂಗ್‌ ದೇಶದ ಮಹಿಳೆಯರಿಗೆ ಈ ರೀತಿ ಕರೆ ಕೊಟ್ಟಿದ್ದಾರೆ. ಕಡಿಮೆ ಜನನ ದರ, ವಯಸ್ಸಾಗ್ತಿರೊ ಜನಸಂಖ್ಯೆ ಚೀನಾಗೆ ದೊಡ್ಡ ತಲೆನೋವಾಗಿದೆ. 2022ರಲ್ಲಿ ಚೀನಾದಲ್ಲಿ ಕೇವಲ 1 ಕೋಟಿ ಮಕ್ಕಳು ಹುಟ್ಟಿವೆ. ಇದೇ ವೇಳೆ ಭಾರತದಲ್ಲಿ ಹುಟ್ಟಿರೊ ಮಕ್ಕಳ ಸಂಖ್ಯೆ 2.3 ಕೋಟಿ. ಅಲ್ಲಿನ ಯುವಕರಲ್ಲಿ ಮಕ್ಕಳನ್ನು ಬೆಳೆಸೊ ಖರ್ಚು, ವೃತ್ತಿಯಲ್ಲಿ ಅಡಚಣೆಗಳು, ಲಿಂಗ ತಾರತಮ್ಯಗಳಿಂದಾಗಿ ಮದುವೆ ಆಗೋದಕ್ಕೆ ಹಿಂಜರಿಕೆ ಇದೆ. ಈ ಎಲ್ಲಾ ಸಮಸ್ಯೆಗಳನ್ನ ನಿವಾರಿಸೋಕೆ ಚೀನಾ ಒಂದಿಲ್ಲೊಂದು ಪ್ರಯತ್ನ ಮಾಡ್ತಾನೆ ಇದೆ. ಇದೀಗ ಸ್ವತಃ ಜಿನ್‌ಪಿಂಗ್‌ ಈ ರೀತಿ ಕರೆಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply