ತೈವಾನ್‌ ಪಕ್ಕದಲ್ಲೇ ಇತಿಹಾಸದಲ್ಲೇ ಅತಿದೊಡ್ಡ ಸಮರಾಭ್ಯಾಸ ಮಾಡುತ್ತಿರೋ ಚೀನಾ!

masthmagaa.com:

ಅಮೆರಿಕ ಸ್ಪೀಕರ್‌ ನ್ಯಾನ್ಸಿ ಫೆಲೋಸಿ ತೈವಾನ್‌ಗೆ ಬಂದು ಹೋಗಿದ್ದು, ಇದರ ಬೆನ್ನಲ್ಲೇ ಈಗ ಮಿಲಿಟರಿ ಸಮರಾಭ್ಯಾಸದ ಹೆಸರಲ್ಲಿ ತೈವಾನ್‌ ಸುತ್ತ ಚೀನಾ ಸೇನೆ ಗಿರಿಕಿ ಹೊಡೀತಿದೆ. ಇದು ತೈವಾನ್‌ ಸುತ್ತ ಮುತ್ತ ಈ ಹಿಂದೆ ಚೀನಾ ಮಾಡಿರೋ ಎಲ್ಲ ಸೇನಾ ಸಮರಾಭ್ಯಾಸಕ್ಕಿಂತ ಅತ್ಯಂತ ದೊಡ್ಡದು ಅಂತ ಹೇಳಲಾಗ್ತಿದೆ. ವರದಿಯ ಪ್ರಕಾರ ಚೀನಾ ಸೇನೆ ತೈವಾನ್‌ನ ಸಾಗರ ಪ್ರದೇಶದಿಂದ ಕೇವಲ 12 ಮೈಲಿದೂರದ ಅಂತರದಲ್ಲೇ ಈ ಯುದ್ದಭ್ಯಾಸ ಮಾಡ್ತಿದೆ. ಇತ್ತ ಅಮೆರಿಕ ಕೂಡ ಫಿಲಿಪೈನ್ಸ್‌ ಸಮುದ್ರದಲ್ಲಿ ನೌಕಾ ಸಮರಾಭ್ಯಾಸ ನಡೆಸುತ್ತಿದ್ದು ಉದ್ವಿಗ್ನತೆ ಮತ್ತಷ್ಟು ಜಾಸ್ತಿಯಾಗಿದೆ. ಇತ್ತ ಫೆಲೋಸಿ ಭೇಟಿ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದ ಚೀನಾದ ವಿದೇಶಾಂಗ ವಕ್ತಾರೆ ಹುವಾ ಚ್ಯುನೆಂಗ್ ʻನಾವು ಹೇಳಿದ್ದನ್ನು ಮಾಡ್ತೇವೆ. ನಮ್ಮ ಪ್ರತಿಕ್ರಿಯೆ ಪರಿಣಾಮಕಾರಿಯಾಗಿರುತ್ತೆ ಅಂತ ಹೇಳಿದ್ರು. ಇದರ ನಂತರ ಈಗ ಚೀನಾ ಭಾರಿ ಮಿಲಿಟರಿ ಅಭ್ಯಾಸ ನಡೆಸ್ತಾಯಿದೆ. ನಾಲ್ಕು ದಿನಗಳ ವರೆಗೆ ಸಮುದ್ರದಲ್ಲಿ ಅಲರ್ಟ್‌ ಘೋಷಣೆ ಮಾಡಿದ್ದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರೋ ತೈವಾನ್‌ ʻಚೀನಾ ನಮ್ಮ ಮೇಲೆ ಯುದ್ದ ಮಾಡೋಕೆ ತಯಾರಿ ನಡೆಸ್ತಿದೆ ಅಂತ ಹೇಳಿದೆ. ಈ ಬೆಳವಣಿಗೆಯ ಮಧ್ಯೆದಲ್ಲೇ ನಮ್ಮ ರಕ್ಷಣಾ ಇಲಾಖೆಯ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿಯಾಗಿದೆ ಅಂತ ತೈವಾನ್ ಆಡಳಿತ ಹೇಳಿಕೊಂಡಿದೆ.

– ಇನ್ನು ತೈವಾನ್‌ ಸುತ್ತ ಚೀನಾದ ಮಿಲಿಟರಿ ಪಡೆಗಳು ಗಸ್ತುತಿರುಗೋದ್ರ ಬಗ್ಗೆ ಪ್ರತಿಕ್ರಿಯಿಸಿರೋ ಯುರೋಪಿಯನ್‌ ಯೂನಿಯನ್‌ ʻಭೇಟಿಯನ್ನು ನೆಪವಾಗಿ ಇಟ್ಕೊಂಡು ತೈವಾನ್ ಜಲಸಂಧಿಯಲ್ಲಿ ಆಕ್ರಮಣಕಾರಿ ಮಿಲಿಟರಿ ಚಟುವಟಿಕೆ ನಡೆಸೋದಕ್ಕೆ ಯಾವುದೇ ಸಮರ್ಥನೆ ಇಲ್ಲ. ನಮ್ಮ ದೇಶಗಳ ಅಧಿಕಾರಿಗಳು ಅಂತರಾಷ್ಟ್ರೀಯ ಪ್ರವಾಸ ಮಾಡುವುದು ಕಾಮನ್‌. ಅದನ್ನೇ ಪ್ರಚೋದನೆ ಅಂತ ತಿಳ್ಕೊಂಡು ಈ ಆಕ್ರಮಣ ಕಾರಿ ನಡೆ ಸರಿಯಲ್ಲ ಅಂತ ಕಿಡಿಕಾರಿದೆ. ಇತ್ತ ಮಿಲಿಟರಿ ಅಭ್ಯಾಸದ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ಚೀನಾಗೆ ಏನ್‌ ಮಾಡ್ತಿದ್ದೀನಿ ಅನ್ನೋ ಪರಿಜ್ಞಾನವೇ ಇಲ್ಲ. ಇದೊಂದು ಬೇಜವಾಬ್ದಾರಿ ನಡೆ ಅಂತ ಹೇಳಿದೆ. ಇನ್ನು ತೈವಾನ್ ಗಲಾಟೆಯ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಪಾಕಿಸ್ತಾನ ʻಜಾಗತಿಕ ಶಾಂತಿ, ಭದ್ರತೆ ಮತ್ತು ಆರ್ಥಿಕತೆಗೆ ಋಣಾತ್ಮಕ ಪರಿಣಾಮ ಬೀರುವ ಮತ್ತೊಂದು ಬಿಕ್ಕಟ್ಟನ್ನು ಈ ಜಗತ್ತು ಭರಿಸೋಕೆ ಸಾಧ್ಯ ಇಲ್ಲ. ಪಾಕಿಸ್ತಾನ ಅಂತಾರಾಷ್ಟ್ರೀಯ ಕಾನೂನುಗಳಿಗೆ ಬೆಲೆ ಕೊಡುತ್ತೆ. ತೈವಾನನ ಈ ಬಿಕ್ಕಟ್ಟು ಶಾಂತಿ ಮತ್ತು ಭದ್ರತೆಗೆ ಹಾನಿ ಉಂಟು ಮಾಡುತ್ತೆ. ನಾವು ಒನ್‌ ಚೀನಾ ಪಾಲಿಸಿಯ ಪರವಾಗಿದ್ದೀವಿ ಅಂತ ಹೇಳಿದೆ. ಇನ್ನು G 7 ರಾಷ್ಟ್ರಗಳು ಪ್ರತಿಕ್ರಿಯಿಸಿ ʻ ಅಮೆರಿಕ ಭೇಟಿಯನ್ನ ನೆಪವಾಗಿಟ್ಟು ಮಾಡ್ತಿರೋ ಈ ಸೇನಾ ಚಟುವಟಿಕೆಗಳು ಈ ಭಾಗವನ್ನ ಉದ್ವಿಗ್ನತೆಗೆ ದೂಡುವ, ಹಾಗೂ ಇಲ್ಲಿರೋ ಶಾಂತಿಯನ್ನ ಅಸ್ಥಿರಗೊಳಿಸುವ ಅಪಾಯ ಉಂಟು ಮಾಡುತ್ತೆ ಅಂತ ಹೇಳಿದೆ. ಇತ್ತ ಆಸಿಯಾನ್‌ ಒಕ್ಕೂಟ ಕೂಡ ಪ್ರಕ್ಷಬ್ದತೆಯ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು ʻಆಸಿಯಾನ್ ಪಕ್ಕದ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆ ಕಳವಳ ಇದೆ. ಇದು ಈ ಭಾಗವನ್ನ ಅಸ್ಥಿರಗೊಳಿಸುವ ಸಾಧ್ಯತೆ ಇದೆ. ಒಂದುವೇಳೆ ತಪ್ಪುಲೆಕ್ಕಚಾರಗಳು ನಡೆದ್ರೆ ಅಂತಿಮವಾಗಿ ದೊಡ್ಡ ಪರಿಣಾಮ ಉಂಟಾಗಲೂ ಬಹದು. ಉಭಯ ಬಣಗಳು ಸಂಯಮ ತೋರಬೇಕು ಅಂತ ನಾವು ಬಲವಾಗಿ ಒತ್ತಾಯಿಸ್ತೀವಿ ಅಂತ ಹೇಳಿದೆ.

– ಇತ್ತ ಇಷ್ಟೆಲ್ಲಾ ಸಂದಿಗ್ಧತೆಯ ಬಗ್ಗೆ ಸ್ವತಃ ಪ್ರತಿಕ್ರಿಯಿಸಿರೋ ಅಮೆರಿಕ ಸ್ಪೀಕರ್‌ ನ್ಯಾನ್ಸಿ ಫೆಲೋಸಿ ʻಚೀನಾದ ಕಮ್ಯುನಿಸ್ಟ್‌ ಪಕ್ಷದಿಂದ ತೈವಾನ್‌ನನ್ನ ಜಾಗತಿಕ ಸಭೆ ಸಮಾರಂಭಗಳಿಗೆ ಹೋಗದಂತೆ ತಡೆಹಿಡಿಯುವ ಕೆಲಸ ಆಗ್ತಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಆ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸೋಕೆ, ಅದರ ಯಶಸ್ಸನ್ನು ಜಗತ್ತಿನ ಮುಂದೆ ಎತ್ತಿ ಹಿಡಿಯೋಕೆ, ನಮ್ಮ ಸಹಕಾರವನ್ನ ಹಾಗೂ ವಿಶ್ವ ನಾಯಕರ ಭೇಟಿಯನ್ನ ತಡೆಯೋಕೆ ಚೀನಾ ಕೈಯಲ್ಲಿ ಸಾಧ್ಯವೇ ಇಲ್ಲ ಅಂತ ತಿರುಗೇಟು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply