ಭಾರತೀಯರ ಸ್ಪಿನ್‌ಗೆ ಆಂಗ್ಲರು ಉಡೀಸ್: ದಾಖಲೆ ಬರೆದ ಜೈಸ್ವಾಲ್‌!

 masthmagaa.com:

ಭಾರತ-ಇಂಗ್ಲೆಂಡ್‌ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್‌ ಧರ್ಮಶಾಲಾದಲ್ಲಿ ಶುರುವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌, ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 218 ರನ್‌ಗೆ ಆಲೌಟ್‌ ಆಗಿದೆ. ಭಾರತದ ಪರ ಕುಲ್ದೀಪ್‌ ಯಾದವ್‌ 5 ವಿಕೆಟ್‌ ಪಡೆದ್ರೆ, 100ನೇ ಟೆಸ್ಟ್‌ ಆಡ್ತಿರೋ ರವಿಚಂದ್ರನ್‌ ಅಶ್ವಿನ್‌ 4 ವಿಕೆಟ್‌ ಪಡೆದು ಮಿಂಚಿದ್ದಾರೆ. ಇನ್ನು ತನ್ನ ಮೊದಲ ಇನಿಂಗ್ಸ್‌ ಆರಂಭಿಸಿರೊ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 135 ರನ್‌ ಕಲೆ ಹಾಕಿದೆ. ಭಾರತದ ಪರ ಉತ್ತಮ ಲಯದಲ್ಲಿರೊ ಯಶಸ್ವಿ ಜೈಸ್ವಾಲ್‌ 57 ರನ್‌ಗಳಿಸಿ ಮತ್ತೆ ಮಿಂಚಿದ್ದಾರೆ. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ ಸಾವಿರ ರನ್‌ ಪೂರೈಸಿದ ದ್ವಿತೀಯ ಆಟಗಾರ ಅನ್ನೊ ದಾಖಲೆ ಬರೆದಿದ್ದಾರೆ. ಜೈಸ್ವಾಲ್ 16 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ರೆ, 14 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರೈಸಿದ್ದ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ನಾಯಕ ರೋಹಿತ್‌ ಶರ್ಮಾ 52 ಹಾಗೂ ಶುಭಮನ್‌ ಗಿಲ್‌ 26 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply