ಹೌತಿಗಳ ದಾಳಿಗೆ ಒಳಗಾದ ಹಡಗು ಕೆಂಪು ಸಮುದ್ರದಲ್ಲಿ ಮುಳುಗಡೆ!

masthmagaa.com:

ಹೌತಿಗಳ ದಾಳಿಗೆ ಫೆಬ್ರುವರಿ 18 ರಂದು ತೀವ್ರ ಹಾನಿಗೊಳಗಾದ ಬ್ರಿಟನ್‌ ಮೂಲದ Rubymar ಹಡಗು ಈಗ ಕೆಂಪು ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಈ ಹಡಗು ಹೌತಿಗಳ ದಾಳಿಗೆ ಸಿಕ್ಕಾಪಟ್ಟೆ ಡ್ಯಾಮೇಜ್‌ ಆಗಿದ್ದು, ಬೇರೆ ದಾರಿಯಿಲ್ದೇ ಇದನ್ನ ಅಲ್ಲೇ ಕೆಂಪು ಸಮುದ್ರದಲ್ಲೇ ಬಿಟ್ಟು ಹೋಗಲಾಗಿತ್ತು. ಕೆಲ ದಿನಗಳ ನಂತ್ರ ಇದ್ರ ಆಯಿಲ್‌ ಕೂಡ ಸಮುದ್ರದಲ್ಲಿ ಲೀಕ್‌ ಆಗಿತ್ತು. ಸಮುದ್ರದ ಸುಮಾರು 29 ಕಿಮೀ ಉದ್ದಕ್ಕೂ ಆಯಿಲ್‌ ಚದುರಿಕೊಂಡಿತ್ತು. ಇದೀಗ ಹಡಗನ್ನ ಒಂಟಿಯಾಗಿ ಬಿಟ್ಟು ಹೋಗಿ ಸುಮಾರು 12 ದಿನಗಳ ನಂತ್ರ ಕಂಪ್ಲೀಟ್‌ ಆಗಿ ನೀರುಪಾಲಾಗಿದೆ. ಇನ್ನೊಂದ್ಕಡೆ ಹೌತಿ ನಿಯಂತ್ರಿತ ಯೆಮೆನ್‌ ಪ್ರದೇಶದ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ. ಈ ಪ್ರದೇಶದಿಂದ ಹೌತಿಗಳು ಮಿಸೈಲ್‌ ಲಾಂಚ್‌ ಮಾಡೋಕೆ ತಯಾರಿ ನಡೆಸ್ತಿದ್ರು. ಸೋ ಆತ್ಮರಕ್ಷಣೆಗಾಗಿ ಅಮೆರಿಕ ಈ ದಾಳಿ ನಡಸಿದೆ ಅಂತ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply