ಹೌತಿಗಳ ಮೇಲಿನ ದಾಳಿ ಎಫೆಕ್ಟ್:‌ ಯೆಮೆನ್‌ ಪ್ರಧಾನಿ ವಜಾ!

masthmagaa.com:

ಅಮೆರಿಕ ಹಾಗೂ ಅದ್ರ ಮಿತ್ರ ಪಡೆಗಳಿಂದ ಹೌತಿಗಳ ಮೇಲೆ ದಾಳಿಯಾಗ್ತಿರೋ ವಿಚಾರ ಯೆಮೆನ್‌ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರಿದೆ. ಯಾಕಂದ್ರೆ ಇದೀಗ ಯೆಮನ್‌ ಪ್ರಧಾನಿಯಾಗಿದ್ದ ಮೈನ್‌ ಅಬ್ದುಲ್‌ ಮಲೀಕ್‌ ಸಯೀದ್‌ರನ್ನ ಅವರ ಸ್ಥಾನದಿಂದ ವಜಾ ಮಾಡಲಾಗಿದೆ. ಅಲ್ಲಿನ ಅಧ್ಯಕ್ಷೀಯ ಮಂಡಳಿ ಮಲಿಕ್‌ ಸಯೀದ್‌ರನ್ನ ವಜಾ ಮಾಡಿದೆ. ಅಲ್ಲದೆ ಅವರ ಜಾಗಕ್ಕೆ ಈ ಹಿಂದೆ ಯೆಮೆನ್‌ ವಿದೇಶಾಂಗ ಸಚಿವರಾಗಿದ್ದ ಅಹ್ಮದ್‌ ಅವಾದ್‌ ಬಿನ್‌ ಮುಬಾರಕ್‌ರನ್ನ ನೇಮಿಸಲಾಗಿದೆ. ಅಂದ್ಹಾಗೆ 2018ರಿಂದ ಯೆಮೆನ್ ಪ್ರಧಾನಿಯಾಗಿದ್ದ ಸಯೀದ್‌, ಸೌದಿ ಅರೆಬಿಯಾ ಜೊತೆ ಕ್ಲೋಸ್‌ ಆಗಿದ್ರು. ಆದ್ರೆ ಇದೇನು ಡಿಫರೆನ್ಸ್‌ ಅನ್ಸಲ್ಲ. ಯಾಕಂದ್ರೆ ಯೆಮನ್‌ ರಾಜಧಾನಿ ಸನಾ ಸೇರಿದಂತೆ ಬಹತೇಕ ಪ್ರದೇಶ ಇರಾನ್‌ ಪ್ರಾಕ್ಸಿ ಗುಂಪು ಹೌತಿ ಕೈಯಲ್ಲಿದೆ. ಅಲ್ಲಿ ಹೌತಿಗಳದ್ದೇ ರಾಜ್ಯಭಾರ.

-masthmagaa.com

Contact Us for Advertisement

Leave a Reply