ಅಮೆರಿಕ ಮೂಲದ ಎರಡು ಸರಕು ಹಡಗುಗಳ ಮೇಲೆ ಮತ್ತೆ ಎರಗಿದ ಹೌತಿಗಳು!

masthmagaa.com:

ಕೆಂಪು ಸಮುದ್ರದಲ್ಲಿ ಇರಾನ್‌ ಬೆಂಬಲಿತ ಹೌತಿಗಳು ತಮ್ಮ ದಾಳಿಯನ್ನ ಮುಂದುವರಿಸಿದ್ದಾರೆ.. ಮತ್ತೆ ಈಗ ಅಮೆರಿಕದ ಎರಡು ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಅಮೆರಿಕದ ಮೇಸ್ಕ್‌ ಡೆಟ್ರಾಯ್ಟ್‌ (Maersk Detroit) ಮತ್ತು ಮೇಸ್ಕ್‌ ಚೆಸಪೀಕ್‌ (Maersk Chesapeake) ಅನ್ನೋ ಸರಕುಗಳನ್ನ ಹೊತ್ತ ಎರಡು ಕಂಟೈನರ್‌ ಹಡಗಿನ ಮೇಲೆ ದಾಳಿ ನಡೆಸಿವೆ. ಹಡಗುಗಳನ್ನ ಟಾರ್ಗೆಟ್‌ ಮಾಡಿ ಒಟ್ಟು ಮೂರು ಆ್ಯಂಟಿ ಶಿಪ್‌ ಬ್ಯಾಲಾಸ್ಟಿಕ್‌ ಕ್ಷಿಪಣಿಗಳನ್ನ ಹೌತಿಗಳು ಹಾರಿಸಿದ್ದಾರೆ. ಪರಿಣಾಮ ಒಂದು ಕ್ಷಿಪಣಿ ಗುರಿ ತಪ್ಪಿ ನೀರುಪಾಲಾಗಿದ್ರೆ, ಇನ್ನೆರಡು ಕ್ಷಿಪಣಿಗಳನ್ನ ಅಮೆರಿಕ ನೌಕೆ ಹೊಡೆದುರುಳಿಸಿದೆ. ಹೀಗಂತ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply