ದೊಡ್ಮನೆ ಕುಡಿಯನ್ನ ಲಾಂಚ್‌ ಮಾಡಿದ ಹೊಂಬಾಳೆ!

masthmagaa.com:

ಬೆಳ್ಳಿ ತೆರೆ ಮೇಲೆ ಮಿ೦ಚಲು ಡಾ.ರಾಜ್‌ ಕುಟು೦ಬದ ಮತ್ತೊಂದು ಕುಡಿ ಸಜ್ಜಾಗಿದೆ. . ಚಂದನವನದ ದೊಡ್ಮನೆಯ ಯುವರಾಜ, ರಾಘಣ್ಣವರ ಕಿರಿಯ ಮಗ, ಯುವರಾಜ್‌ ಕುಮಾರ್‌ ಅವರ ಚೊಚ್ಚಲ ಸಿನಿಮಾ ಟೈಟಲ್‌ ರಿವೀಲ್‌ ಅಗಿದೆ. ದೊಡ್ಮನೆಯ ಹುಡುಗನನ್ನ ಲಾಂಚ್‌ ಮಾಡೋಕೆ ದೊಡ್ಡ ಪ್ರೊಡಕ್ಷನ್‌ ಮನೆಯೇ ಮುಂದೆಬಂದಿದೆ ʼಯುವʼ ಸಿನಿಮಾ ಮೂಲಕ ಯುವರಾಜ್‌ಕುಮಾರ್‌ ಕನ್ನಡ ಚಿತ್ರರ೦ಗಕ್ಕೆ ಗ್ರ್ಯಾ೦ಡ್‌ ಎ೦ಟ್ರಿ ಕೊಡುತ್ತಿದ್ದಾರೆ. ಯುವ ಜೊತೆಗೆ KGF, ಕಾಂತಾರದಂತಹ ಸೂಪರ್‌ ಹಿಟ್‌ ಚಿತ್ರಗಳನ್ನ ಕೊಟ್ಟ ಹೊ೦ಬಾಳೆ ಸ೦ಸ್ಥೆ ಮತ್ತು ನಿರ್ದೇಶಕ ಸ೦ತೋಷ್‌ ರಾಮ್‌ ಕೈಜೋಡಿಸಿದ್ದಾರೆ. ಈ ಸಿನಿಮಾಗೆ ಮೊದಲು ʼಜ್ವಾಲಾಮುಖಿʼ ಅಥವಾ ʼಅಶ್ವಮೇಧʼ, ಎರಡರಲ್ಲಿ ಒ೦ದು ಹೆಸರು ಇಡಲಾಗತ್ತೆ ಅ೦ತಾ ಚರ್ಚೆ ಆಗಿತ್ತು. ಇದೀಗ ʼಯುವʼ ಟೈಟಲ್‌ ಫೈನಲ್‌ ಆಗಿದೆ. ಟೈಟಲ್‌ ಟೀಸರ್‌ನಲ್ಲಿ, ನೀವು ದಾಟಿರೋದು ಬ್ಲಡ್‌ ಲೈನ್‌, ರಕ್ತ ಹರಿದೆ ಹರಿಯುತ್ತದೆ ಅನ್ನೊ ಖಡಕ್‌ ಡೈಲಾಗ್‌ ಹೇಳುವ ಮೂಲಕ ʼಯುವʼ ಮಿ೦ಚಿದ್ದಾರೆ. ಚಿತ್ರದ ಟೀಸರ್‌ ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವ್ರ ಹುಟ್ಟುಹಬ್ಬದಂದು ರಿಲೀಸ್‌ ಮಾಡಲಾಗುತ್ತೆ ಎನ್ನಲಾಗಿದೆ. ಇನ್ನು ಈ ವರ್ಷ ಡಿಸೆ೦ಬರ್‌ 22 ಕ್ಕೆ ಸಿನಿಮಾ ತೆರೆ ಕಾಣಲಿದೆ.

-masthmagaa.com

Contact Us for Advertisement

Leave a Reply