ಭೂಮಿಯ 8ನೇ ಖಂಡ ಹೇಗಿದೆ ಗೊತ್ತಾ?

-masthmagaa.com:

ಸಾಗರದ ತಳದಲ್ಲಿ ಕಾಣೆಯಾಗಿದ್ದ ಭೂಮಿಯ 8ನೇ ಖಂಡವನ್ನ ವಿಜ್ಞಾನಿಗಳು ಪತ್ತೆಹಚ್ಚಿದ್ದು, ಅದರ ಮ್ಯಾಪ್‌ನ್ನ ಬಿಡುಗಡೆ ಮಾಡಿದ್ದಾರೆ. ಸಾಗರ ತಳದಿಂದ ತೆಗದುಕೊಂಡ ಬಂಡೆಯ ಮಾದರಿಗಳಿಂದ ಪಡೆದ ಡೇಟಾ ಬಳಸಿಕೊಂಡು ವಿಜ್ಞಾನಿಗಳು ಝೀಲಂಡಿಯಾ ಖಂಡದ ಮ್ಯಾಪ್‌ ತಯಾರಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ಝೀಲಾಂಡಿಯಾವನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿದೆ. ಸದ್ಯ ಸಮುದ್ರದ ತಳದಿಂದ ತರಲಾದ ಬಂಡೆಗಳು ಮತ್ತು ಕೆಸರಿನ ಮಾದರಿಗಳ ಸಂಗ್ರಹಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಜೊತೆಗೆ ಸಮುದ್ರ ತೀರದ ಕೆಲವೊಂದು ಸಣ್ಣಪುಟ್ಟ ಕಲ್ಲುಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದ ಬಂದ ಡೇಟಾವನ್ನ ಬಳಸಿಕೊಂಡು ಹೊಸ ಖಂಡದ ಬಗ್ಗೆ ಮಾಹಿತಿ ನೀಡಲಾಗಿದೆ. ಸುಮಾರು 8.3 ಕೋಟಿ ವರ್ಷಗಳ ಹಿಂದೆ ಗೊಂಡ್ವಾನ ಸೂಪರ್‌ಕಾಂಟಿನೆಂಟ್‌ ಸ್ಪ್ಲಿಟ್‌ ಆಗಿ ಈಗಿನ ಖಂಡಗಳು ರಚನೆಯಾಗಿದ್ದು, ಅದೇ ಸಮಯದಲ್ಲಿ ಝೀಲಾಂಡಿಯಾ ಕೂಡ ಸೃಷ್ಟಿಯಾಗಿದೆ. ಆದ್ರೆ ಝೀಲಾಂಡಿಯಾ ಖಂಡವು 96% ನೀರಿನಲ್ಲಿ ಮುಳುಗಿದ್ದು, ಅದರ 6% ಭೂಬಾಗ ನ್ಯೂಜಿಲ್ಯಾಂಡ್‌ ಮತ್ತು ದ್ವೀಪಗಳು ರೂಪಗೊಂಡಿವೆ.

-masthmagaa.com

Contact Us for Advertisement

Leave a Reply