ಚೀನಾ ಅಧ್ಯಕ್ಷರ ಜೊತೆ ಮಾತನಾಡಬೇಕು ಎಂದ ಯುಕ್ರೇನ್‌ ಪ್ರೆಸಿಡೆಂಟ್ ವೊಲಿಡಿಮಿರ್‌ ಝೆಲೆನ್ಸ್ಕಿ!

masthmagaa.com:

5 ತಿಂಗಳಿನಿಂದ ನಿರಂತರವಾಗಿ ನಡಿತೀರೊ ರಷ್ಯಾ-ಯುಕ್ರೇನ್‌ ಸಂಘರ್ಷವನ್ನ ಅಂತ್ಯಗೊಳಿಸೋಕೆ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್‌ ಜೊತೆ ನಾನು ನೇರ ಮಾತುಕತೆ ನಡೆಸಬೇಕು ಅಂತ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸಿ ಹೇಳಿದ್ದಾರೆ. ಈ ಬಗ್ಗೆ ಮಾತಾಡಿದ ಅವರು ʻಚೀನಾ ಒಂದು ಶಕ್ತಿಯುತ ದೇಶ ಹಾಗೂ ಪವರ್‌ಫುಲ್‌ ಎಕಾನಮಿಯನ್ನ ಹೊಂದಿದೆ. ಸೋ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ರಷ್ಯಾ ಮೇಲೆ ಪ್ರಭಾವ ಬೀರಿ ಈ ಯುದ್ದವನ್ನ ಕೊನೆಗೊಳಿಸಬಹದು. ಅದಕ್ಕಾಗಿ ನಾನು ಅವರನ್ನ ನೇರವಾಗಿ ಭೇಟಿ ಮಾಡ್ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply