ರಷ್ಯಾದ ಕ್ರಿಮಿನಲ್‌ಗಳ ವಾಂಟೇಡ್‌ ಲಿಸ್ಟ್‌ನಲ್ಲಿ ಝೆಲೆನ್ಸ್ಕಿ ಹೆಸರು!

masthmagaa.com:

ಯುಕ್ರೇನ್‌ ಜೊತೆ ಯುದ್ದ ನಡೆಸ್ತಿರೊ ರಷ್ಯಾ ಇದೀಗ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವ್ರನ್ನೆ ತನ್ನ ವಾಂಟೇಡ್‌ ಕ್ರಿಮಿನಲ್‌ಗಳ ಲಿಸ್ಟ್‌ಗೆ ಸೇರಿಸಿಕೊಂಡಿದೆ. ಈ ಮೂಲಕ ತನ್ನ ವಿರುದ್ದ ಕತ್ತಿ ಮಸಿತಿರೊ ಯುಕ್ರೇನ್‌ ಅಧ್ಯಕ್ಷರನ್ನ ಬಂಧಿಸೊಕೂ ರಷ್ಯಾ ಹಾತೊರೆಯಲು ಶುರುಮಾಡಿದೆ. ಆದ್ರೆ ಈ ಕ್ರಮವನ್ನ ತಳ್ಳಿಹಾಕಿರೊ ಯುಕ್ರೇನ್‌, ಇದು ರಷ್ಯಾದ ಹತಾಶೆಯ ಸಂಕೇತ ಅಂತ ಪ್ರತಿಕ್ರಿಯೆ ನೀಡಿದೆ.

-masthmagaa.com

Contact Us for Advertisement

Leave a Reply