ಬಾಲಕಿ ಜೀವ ಕಸಿದ ರೆಸ್ಟೋರೆಂಟ್‌: ಝೊಮ್ಯಾಟೊನಿಂದ ಔಟ್!

masthmagaa.com:

ತನ್ನ ಬರ್ತ್‌ ಡೇಗಂತ ಝೊಮ್ಯಾಟೊದಿಂದ ಕೇಕ್‌ ತರಸಿಕೊಂಡು ತಿಂದ ಬಾಲಕಿಯೊಬ್ಬಳು ಮೃತಪಟ್ಟು, ಅದನ್ನ ತಿಂದ ಆಕೆಯ ಮನೆಯವ್ರು ಕೂಡ ಅಸ್ವಸ್ಥಗೊಂಡಿರೋ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ. ಅಲ್ಲಿನ ʻಕೇಕ್‌ ಕಾನ್ಹಾʼ ಅನ್ನೋ ರೆಸ್ಟೋರೆಂಟ್‌ನಿಂದ ಆರ್ಡರ್‌ ಮಾಡಿದ ಕೇಕ್‌ನಿಂದ ಈ ಘಟನೆ ಸಂಭವಿಸಿದೆ. ಸೋ, ಈ ಬಗ್ಗೆ ತಕ್ಷಣ ಕ್ರಮ ತೆಗೆದ್ಕೊಂಡಿರೋ ಝೊಮ್ಯಾಟೊ, ತನ್ನ ಪ್ಲಾಟ್‌ಫಾರ್ಮ್‌ನಿಂದ ಈ ರೆಸ್ಟೋರೆಂಟ್‌ನ್ನ ತೆಗೆದುಹಾಕಿದೆ. ಜೊತೆಗೆ ಭವಿಷ್ಯದಲ್ಲೂ ಈ ರೆಸ್ಟೋರೆಂಟ್‌ನ ಓನರ್‌ ಝೊಮೆಟೊ ಜೊತೆ ಆಪರೇಟ್‌ ಮಾಡದಿರೋ ಹಾಗೇ ನಿರ್ಬಂಧಿಸಿದೆ.

-masthmagaa.com

Contact Us for Advertisement

Leave a Reply