ಗ್ಯಾಪ್‌ ಕೊಟ್ಟು ಮತ್ತೆ ಜಿಗಿದ ಭಾರತದ ಷೇರುಪೇಟೆ: ಆಟೋ ಸ್ಟಾಕ್‌ ಕಮ್‌ಬ್ಯಾಕ್

masthmagaa.com:

ಒಂದು ದಿನ ಗ್ಯಾಪ್‌ ಕೊಟ್ಟು ಭಾರತದ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳು ಮತ್ತೆ ರೇಸಿಗೆ ಇಳಿದಿವೆ. ಅಮೆರಿಕ ಟೆಕ್‌ ಸ್ಟಾಕ್‌ಗಳ ಅರ್ನಿಂಗ್‌ ರಿಪೋರ್ಟ್‌ ಹಾಗೂ ಯೂರೋಪ್‌ನ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ ಅಥ್ವಾ MPIನ ಪಾಸಿಟಿವ್‌ ಡೇಟಾದ ಇಂಪ್ಯಾಕ್ಟ್‌ ಭಾರತದ ಮಾರ್ಕೆಟ್‌ಮೇಲಾಗಿದೆ. ಅಲ್ಲದೆ ಫೆಬ್ರವರಿಯಲ್ಲೂ ಭಾರತದ ವಾಣಿಜ್ಯ ಚಟುವಟಿಕೆಯಲ್ಲಿ ಇಂಪ್ರೂವ್‌ಮೆಂಟ್‌ ಕಂಡಿರೋದ್ರಿಂದ ಮಾರ್ಕೆಟ್‌ ಸ್ಥಿರವಾಗಿ ಗ್ರೋವ್ತ್‌ ಆಗ್ತಿದೆ. ವಾರಾಂತ್ಯದ ಟ್ರೇಡಿಂಗ್‌ನಲ್ಲಿ ನಿಫ್ಟಿ 162 ಪಾಯಿಂಟ್‌ ಗಳಿಸಿ 22,217ಕ್ಕೆ ರೀಚ್‌ ಆಗಿದೆ. ಇದೇ ಮೊದಲ ಬಾರಿಗೆ ಈ ಇಂಡೆಕ್ಸ್‌ 22,200 ಪಾಯಿಂಟ್ಸ್‌ ಕ್ರಾಸ್‌ ಮಾಡಿದೆ. ಅತ್ತ ಸೆನ್ಸೆಕ್ಸ್‌ 535 ಪಾಯಿಂಟ್‌ ಜಿಗಿದು 73,158ರಲ್ಲಿ ವಾರದ ವಹಿವಾಟು ಮುಗಿಸಿದೆ. ಸ್ಪೇಸ್‌ ಸೆಕ್ಟರ್‌ ಸ್ಟಾಕ್‌ಗಳು ಬೂಮ್‌ ಆಗಿದ್ರೆ, ಆಟೋ ಸೆಕ್ಟರ್‌ 2 ದಿನದ ಲಾಸನ್ನ ರಿಕವರ್‌ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply