ಜೋ ಬೈಡೆನ್​​ಗೆ ಎಂಥಾ ಆಸೆ ಬಂದಿದೆ ನೋಡಿ..

masthmagaa.com:

ವಾಷಿಂಗ್ಟನ್​: 2024ರ ಅಧ್ಯಕ್ಷೀಯ ಚುನಾವಣೆಗೂ ಸ್ಪರ್ಧಿಸೋ ಪ್ಲಾನ್ ಇದೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈಗಾಗಲೇ ಬೈಡೆನ್ ಮತ್ತು ಡೆಮಾಕ್ರಟಿಕ್ ಪಕ್ಷದ ಜನಪ್ರಿಯತೆ ಸಮೀಕ್ಷೆಗಳಲ್ಲಿ ಇಳಿಮುಖವಾಗುತ್ತಾ ಸಾಗ್ತಾ ಇದೆ. ಜೊತೆಗೆ ಆಂತರಿಕ ಕಚ್ಚಾಟ, ಬೈಡೆನ್ ಮತ್ತು ಕಮಲಾ ಹ್ಯಾರಿಸ್ ನಡುವೆ ಆಗಿ ಬರ್ತಿಲ್ಲ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಿರುವಾಗಲೇ ಈ ಘೋಷಣೆ ಮಾಡಿದ್ದಾರೆ ಜೋ ಬೈಡೆನ್. ಮೊನ್ನೆ ಶನಿವಾರ ಇವರ ಹುಟ್ಟುಹಬ್ಬ ಇತ್ತು. 79ನೇ ವಶಕ್ಕೆ ಕಾಲಿಟ್ಟಿರೋ ಜೋ ಬೈಡೆನ್​​​​ಗೆ ಮುಂದಿನ ಚುನಾವಣೆ ವೇಳೆಗೆ 82 ವರ್ಷ ವಯಸ್ಸಾಗಿರುತ್ತೆ. ಈಗಾಗಲೇ ಜೋ ಬೈಡೆನ್ ಇತಿಹಾಸದಲ್ಲೇ ಅತಿ ವಯಸ್ಸಾದ ಅಧ್ಯಕ್ಷ ಅನ್ನೋ ಹೆಸರು ಪಡೆದಿದ್ದಅರೆ. ಆದ್ರೂ ಕೂಡ ಜೋ ಬೈಡೆನ್ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply