masthmagaa.com: ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕದಲ್ಲಿ ಕೊರೋನಾ ಡೈಲಿ ಕೇಸಸ್ ಜಾಸ್ತಿಯಾಗ್ತಿದೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ. ಕಳೆದ 24 ಗಂಟೆಗಳಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ 85 ಪರ್ಸೆಂಟ್​ನಷ್ಟು ಪ್ರಕರಣ ಈ 6 ರಾಜ್ಯಗಳಿಗೇ ಸೇರಿದೆ. ದೇಶದಲ್ಲಿ ಒಟ್ಟು 17,407 ಪ್ರಕರಣ ದೃಢಪಟ್ಟಿತ್ತು. ಅದ್ರಲ್ಲಿ ಮಹಾರಾಷ್ಟ್ರದ್ದೇ 9,855.. ಕೇರಳದ್ದು 2,765, ಪಂಜಾಬ್​ದು 778, ಕರ್ನಾಟಕದ್ದು 528, ತಮಿಳುನಾಡಿಂದು 489, ಗುಜರಾತ್​ದು 475.. ಮತ್ತೊಂದುಕಡೆ ದೇಶದಲ್ಲಿ ಬ್ರಿಟನ್​, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರಿ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 242ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿ: ಆಸ್ಪತ್ರೆಗಳು ನಿಗದಿತ ಸಮಯದಲ್ಲೇ ಲಸಿಕೆ ಹಾಕಬೇಕು ಅಂತೇನೂ ಇಲ್ಲ.. ದಿನದ 24 ಗಂಟೆ ಯಾವಾಗ ಬೇಕಾದ್ರೂ ಲಸಿಕೆ ಹಾಕಬಹುದು ಅಂತ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ಅಭಿಯಾನದ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಲಸಿಕೆ ಹಾಕುವ ಸಂಬಂಧ ನಿಗದಿಪಡಿಸಲಾಗಿದ್ದ ಸಮಯವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಹೀಗಾಗಿ ದಿನದಂತ್ಯದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಅಥವಾ ಬೆಳಗ್ಗೆ ಬೇಗನೇ ಲಸಿಕೆ ಹಾಕಲು ಶುರು ಮಾಡಬಹುದು. ಹೀಗೆ ಮಾಡಿದ್ರೆ ಲಸಿಕೆ ಅಭಿಯಾನ ವೇಗ ಪಡೆದುಕೊಳ್ಳುತ್ತೆ.. ಹೆಚ್ಚಿನ ಜನ ಕೊರೋನಾದಿಂದ ಬಚಾವ್ ಆಗಲು ಸಾಧ್ಯವಾಗುತ್ತೆ ಅಂತ ಅಭಿಪ್ರಾಯಪಟ್ಟಿದ್ದಾರೆ. ನಾವೀಗ ಬಿಡುಗಡೆ ಮಾಡಿರುವ ಕೋವಿನ್ ಆ್ಯಪ್​ ಮತ್ತು ವೆಬ್​ಸೈಟ್​​​ನಲ್ಲೂ ಕೂಡ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಅನ್ನೋ ಟೈಂ ಲಿಮಿಟ್ ಫಿಕ್ಸ್ ಮಾಡಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಮಯದವರೆಗೆ ಲಸಿಕೆ ಹಾಕಬಹುದು ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಧಾರ ಅಂತ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಕಾರ್ನೆಲ್ ವಿವಿಯ ಪ್ರೊಫೆಸರ್ ಮತ್ತು ಭಾರತದ ಮಾಜಿ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಅವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ 1975ರಿಂದ 77ರವರೆಗೆ ತುರ್ತುಪರಿಸ್ಥಿತಿ ಹೇರಿದ್ದು ಖಂಡಿತ ತಪ್ಪು. ಆಗ ಸಾಂವಿಧಾನಿಕ ಹಕ್ಕುಗಳನ್ನು ತೆಗೆದುಹಾಕಿ, ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಹಲವಾರು ವಿಪಕ್ಷ ನಾಯಕರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಇವೆಲ್ಲಾ ತಪ್ಪಾದ್ರೂ ಕೂಡ ಸದ್ಯದ ಪರಿಸ್ಥಿತಿ ಆ ಪರಿಸ್ಥಿತಿಗಿಂತಲೂ ತುಂಬಾ ಭಿನ್ನವಾಗಿದೆ. ಕಾಂಗ್ರೆಸ್ ಯಾವತ್ತೂ ಕೂಡ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಲು ಯತ್ನಿಸಲಿಲ್ಲ. ಆದ್ರೆ ಬಿಜೆಪಿ  ಇಂದು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಲ್ಲಿ ತಮ್ಮವರನ್ನು ಸೇರಿಸುತ್ತಿದೆ. ಹೀಗಾಗಿ ನಾವು ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದ್ರೂ ಕೂಡ ಅವರ ಜನರನ್ನು ಸಾಂವಿಧಾನಿಕ ಸ್ಥಾನಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಅಷ್ಟೇ ಅಲ್ಲ.. ಪ್ರಜಾಪ್ರಭುತ್ವ ಸರಿಯಾಗಿ ಕೆಲಸ ಮಾಡಬೇಕೆಂದ್ರೆ ಅಲ್ಲಿರೋ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸRead More →

masthmagaa.com: ಕೋಲ್ಕತ್ತ: ಮಾರ್ಚ್​ 7ರಂದು ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ಸಮಾವೇಶಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಭಾಗಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಸೌರವ್ ಗಂಗೂಲಿ ಆರೋಗ್ಯ ಸರಿಯಾಗಿದ್ದರೆ, ವಾತಾವರಣ ಸರಿಹೊಂದುವಂತಿದ್ದರೆ ಬರಬಹುದು.. ಅವರು ಬಂದ್ರೆ ನಮಗೂ ಖುಷಿಯಾಗುತ್ತೆ.. ಅವರಿಗೂ ಖುಷಿಯಾಗುತ್ತೆ.. ಸಮಾವೇಶಕ್ಕೆ ಬರೋ ಜನರಿಗೂ ಖುಷಿಯಾಗುತ್ತೆ. ಹೀಗಾಗಿ ಅವರು ಬಂದರೆ ನಾವು ಸ್ವಾಗತಿಸುತ್ತೇವೆ..  ಆದ್ರೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ಅಂತ ಹೇಳಿದೆ. ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೌರವ್ ಗಂಗೂಲಿ ಜನವರಿ 31ರಂದು ಡಿಸ್ಚಾರ್ಜ್ ಆಗಿದ್ರು. ಅವರಿಗೆ ಎರಡೆರಡು ಬಾರಿ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಸದ್ಯ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಈ ನಡುವೆಯೇ ಅವರು ವಿಧಾನಸಭೆ ಚುನಾವಣೆ ಹೊತ್ತಲ್ಲೇ ರಾಜಕೀಯ ಸೇರಲಿದ್ದಾರೆ ಅನ್ನೋ ಊಹಾಪೋಹಗಳು ಕೂಡ ಹರಿದಾಡ್ತಿವೆ. ಸೌರವ್ ಗಂಗೂಲಿಯವರು ಪಶ್ಚಿಮ ಬಂಗಾಳದವರೇ ಆಗಿದ್ದು, ಅಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಚೆನ್ನೈ: ಮಕ್ಕಳ್ ನೀದಿ ಮಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಇಂದು 2ನೇ ಹಂತದ ಪ್ರಚಾರಕ್ಕೆ ಧುಮುಕಿದ್ದಾರೆ. ಚೆನ್ನೈನ ಅಲಂದೂರಿನಲ್ಲಿ ಪ್ರಚಾರ ಆರಂಭಿಸಿದ್ದು, ಇದೇ ಕ್ಷೇತ್ರದಿಂದ ಅವರು ಕಣಕ್ಕಿಳಿಯೋ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು 2 ಕಾರಣಗಳಿವೆ.. ಒಂದು 1967ರಿಂದ 76ರವರೆಗೆ ಹತ್ತತ್ರ 10 ವರ್ಷ ಈ ಕ್ಷೇತ್ರ ತಮಿಳುನಾಡು ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರ ಕ್ಷೇತ್ರವಾಗಿತ್ತು. ಇದು ಒಂದು ಕಾರಣವಾದ್ರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷಕ್ಕೆ ನಗರ ಪ್ರದೇಶದಲ್ಲಿ ಶೇ.10ರಷ್ಟು ಮತ ಬಂದಿತ್ತು. ಈ ಎರಡು ಕಾರಣಗಳಿಂದಾಗಿ ಕಮಲ್ ಹಾಸನ್ ಈ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ ಅಂತ ಹೇಳಲಾಗ್ತಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿ: ಸರ್ಕಾರದ ನಿಲುವಿಗೆ ವಿರುದ್ಧವಾಗಿ ಮಾತನಾಡೋದು ದೇಶದ್ರೋಹವೆಂದು ಪರಿಗಣಿಸಲು ಸಾಧ್ಯವಿಲ್ಲ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಕಾಯ್ದೆಯನ್ನು ರದ್ದುಪಡಿಸಿತ್ತು. ಇದಕ್ಕೆ ಜಮ್ಮು ಕಾಶ್ಮೀರ ಮಾಜಿ ಸಿಎಂ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಭಾರಿ ವಿರೋಧ ವ್ಯಕ್ತಪಡಿಸಿದ್ರು. ಅದ್ರ ಬೆನ್ನಲ್ಲೇ ಫಾರೂಖ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್​​ಗಾಗಿ ಚೀನಾ ಮತ್ತು ಪಾಕಿಸ್ತಾನದಿಂದ ನೆರವು ಕೇಳಿದ್ದಾರೆ ಅಂತ ಸುಪ್ರೀಂಕೋರ್ಟ್​​ಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ರು. ಆದ್ರೆ ತಮ್ಮ ಆರೋಪವನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿದ್ದರಿಂದ ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್​​, 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಸರ್ಕಾರದ ವಿರುದ್ಧ ಮಾತಾಡಿದ್ರೆ ದೇಶದ್ರೋಹ ಆಗಲ್ಲ ಅಂತಲೂ ಅಭಿಪ್ರಾಯಪಟ್ಟಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬೆಂಗಳೂರು: ಹಸಿಬಿಸಿ ವಿಡಿಯೋ ಹೊರಬಿದ್ದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗಿ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಜೊತೆಗೆ ಪಕ್ಷಕ್ಕೆ ಮುಜುಗರವಾಗಬಾರದು ಅಂತ ರಾಜೀನಾಮೆ ನೀಡುತ್ತಿದ್ದೇನೆ. ನಾನು ಈ ಕೇಸ್​​ನಲ್ಲಿ ಗೆದ್ದು ಬಂದ ಬಳಿಕ ಮತ್ತೆ ಸಚಿವ ಸ್ಥಾನ ಪಡೆಯತ್ತೇನೆ ಅಂತ ಕೂಡ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಪಶ್ಚಿಮ ಬಂಗಾಳ: ದೇಶದಲ್ಲಿ 2ನೇ ಹಂತದ ಲಸಿಕೆ ಅಭಿಯಾನ ನಡೀತಾ ಇದೆ. ಲಸಿಕೆ ಹಾಕಿಸಿಕೊಂಡವರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತೆ. ಆರೋಗ್ಯ ಇಲಾಖೆಯಿಂದ ನೀಡಲಾಗುವ ಆ ಸರ್ಟಿಫಿಕೇಟ್​​ನಲ್ಲಿ ಪ್ರಧಾನಿ ಮೋದಿಯವರ ಒಂದು ಫೋಟೋ ಕೂಡ ಇದೆ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ, ಪ್ರಧಾನಿ ಮೋದಿಯವರು ಸರ್ಕಾರಿ ಸಂಸ್ಥೆಗಳನ್ನು ಸ್ವಂತ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಈ ಮೂಲಕ ವೈದ್ಯರು, ನರ್ಸ್​ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಿಗಬೇಕಾದ ಹೊಗಳಿಕೆಯನ್ನು ತಾವು ಕದಿಯುತ್ತಿದ್ದಾರೆ ಅಂತ ಕಿಡಿಕಾರಿದೆ. ಸರ್ಟಿಫಿಕೇಟ್​​ನಲ್ಲಿ ಪ್ರಧಾನಿ ಮೋದಿ ಫೋಟೋ ಜೊತೆಗೆ ಸಂದೇಶ ಕೂಡ ಹಾಕಲಾಗಿದೆ. ಈ ಮೂಲಕ ತೆರಿಗೆದಾರರ ದುಡ್ಡಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ತಡೆಯಬೇಕು ಅಂತ ಟಿಎಂಸಿ ನಾಯಕ ಡೆರಿಕ್ ಒಬ್ರಿಯಾನ್ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಹಾರಾಷ್ಟ್ರ: ಕೊರೋನಾ ಲಸಿಕೆ 2ನೇ ಡೋಸ್ ಹಾಕಿಸಿಕೊಂಡ 15 ನಿಮಿಷಗಳಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭೀವಂಡಿಯ ಸುಖದೇವ್ ಕಿರ್ದತ್​ ಮೃತ ದುರ್ದೈವಿ. ಕಣ್ಣಿನ ತಜ್ಞರ ಜೊತೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವರಿಗೆ ಜನವರಿ 28ರಂದು ಮೊದಲ ಡೋಸ್ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ. ಅದರಂತೆ ನಿನ್ನೆ 2ನೇ ಡೋಸ್ ಹಾಕಿಸಿಕೊಂಡಿದ್ರು. ಅಬ್ಸರ್ವೇಷನ್​​ನಲ್ಲಿ ಇದ್ದಾಗಲೇ ಇದ್ದಕ್ಕಿದ್ದಂತೆ ತಲೆ ತಿರುಗಿ ಬಿದ್ದಿದ್ದಾರೆ. ನಂತರ ಅವರನ್ನು ಇಂದಿರಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದ್ರೂ ಪ್ರಯೋಜನವಾಗಲಿಲ್ಲ. ಆದ್ರೆ ಸಾವಿಗೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಪೋಸ್ಟ್​ ಮಾರ್ಟಮ್ ವರದಿ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಅಂತ ವೈದ್ಯರು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿ: ಸ್ಥಳೀಯ ಚುನಾವಣೆ ನಡೆದ 5ರ ಪೈಕಿ 4 ಸ್ಥಾನಗಳನ್ನು ಗೆಲ್ಲುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಇಲ್ಲಿನ ಕಲ್ಯಾಣ್​ಪುರಿ, ರೋಹಿಣಿ, ತ್ರಿಲೋಕ್​ಪುರಿ, ಶಾಲಿಮಾರ್ ಮತ್ತು ಚೌವ್ಹಾಣ್ ಬಂಗಾರ್ ನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಅದ್ರಲ್ಲಿ ಚೌವ್ಹಾಣ್ ಬಂಗಾರ್ ಒಂದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಉಳಿದೆಲ್ಲಾ ಕ್ಷೇತ್ರಗಳನ್ನು ಆಪ್ ಗೆದ್ದುಕೊಂಡಿದೆ. ಇದು 2022ರಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗೆ ಜನ ಬಿಜೆಪಿಗೆ ನೀಡಿರುವ ಸಂದೇಶವಾಗಿದೆ. ದೆಹಲಿಯಲ್ಲಿ ಜನ ಬಿಜೆಪಿಯ ಆಡಳಿತವನ್ನು ಇಷ್ಟಪಡೋದಿಲ್ಲ. ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ಆಡಳಿತಕ್ಕೆ ಜನ ಮತ ಹಾಕುತ್ತಾರೆ ಅಂತ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →