ದೇಶದಲ್ಲಿ ಏಳುತ್ತಾ ಕೊರೋನಾದ ಮೂರನೇ ಅಲೆ?

masthmagaa.com:

ದೆಹಲಿ: ದೇಶದಲ್ಲಿ 21 ಮಂದಿಯಲ್ಲಿ ಒಮೈಕ್ರಾನ್ ಕೊರೋನಾ ಪತ್ತೆಯಾಗಿರುವ ಹೊತ್ತಲ್ಲೇ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮೂರನೇ ಅಲೆಯ ಎಚ್ಚರಿಕೆ ನೀಡಿದೆ. ಇವತ್ತು ಸುದ್ದಿಗೋಷ್ಠಿ ನಡೆಸಿದ ತಜ್ಞರ ತಂಡ, ಒಮೈಕ್ರಾನ್​​ನ ಈವರೆಗೆ ಲಭ್ಯವಿರೋ ಮಾಹಿತಿಯನ್ನು ಗಮನಿಸಿದ್ರೆ ಅದು ಹೆಚ್ಚಿನ ನುಗ್ಗುವಿಕೆ ಮತ್ತು ಹೆಚ್ಚು ಜನರಿಗೆ ಹರಡೋ ಸಾಮರ್ಥ್ಯ ಹೊಂದಿದೆ. ಭಾರತ ನಾರ್ಮಲ್ ಸ್ಥಿತಿಗೆ ಬರುತ್ತಿರುವ ಹೊತ್ತಲ್ಲಿ ಒಮೈಕ್ರಾನ್ ಒಂದು ದೊಡ್ಡ ಹಿನ್ನಡೆಯಾಗಿದೆ. ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ರೆ, ನಾವು ದೊಡ್ಡ ಮಟ್ಟದ ಮೂರನೇ ಅಲೆಯನ್ನು ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಆದ್ರೆ ಭಾರತದಲ್ಲಿ ಈಗಾಗಲೇ 126 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದ್ದು, ವಯಸ್ಕರ ಪೈಕಿ 50 ಪರ್ಸೆಂಟ್​​​​​​​​​​​ ಜನರಿಗೆ ಲಸಿಕೆ ಹಾಕಿಯಾಗಿದೆ. ಹೀಗಾಗಿ ಒಮೈಕ್ರಾನ್ ಹರಡಿದ್ರೂ ಅದ್ರ ಪರಿಣಾಮ ತಡೆಯಬಹುದು ಅಂತ ಕೂಡ ಐಎಂಎ ತಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply