ಧಾರಾಕಾರ ಮಳೆ, ಜೈಲು ಕಟ್ಟಡವೇ ಧ್ವಂಸ: ಕನಿಷ್ಠ 118 ಖೈದಿಗಳು ಎಸ್ಕೇಪ್!

masthmagaa.com:

ಧಾರಾಕಾರ ಮಳೆಯಿಂದಾಗಿ ಜೈಲಿನ ಕಟ್ಟಡಕ್ಕೆ ಹಾನಿಯಾದ ಪರಿಣಾಮ ಕನಿಷ್ಠ 118 ಕೈದಿಗಳು ಪರಾರಿಯಾಗಿರೊ ಘಟನೆ ನೈಜೀರಿಯಾದಲ್ಲಿ ನಡೆದಿದೆ. ರಾಜಧಾನಿ ಅಬುಜಾ ಬಳಿಯ ಸುಲೆಜಾ ಕಾರಾಗೃಹದ ಪ್ರದೇಶದಲ್ಲಿ ಕೆಲ ಗಂಟೆಗಳ ಕಾಲ ನಿರಂತರವಾಗಿ ಭಾರಿ ಮಳೆಯಾಗಿದ್ದು, ಇದ್ರ ಪರಿಣಾಮ ಜೈಲಿನ ಗೋಡೆ ಹಾಗೂ ಸುತ್ತಮುತ್ತಲಿನ ಕಟ್ಟಡ ಕೂಡ ಭಾಗಶಃ ಧ್ವಂಸವಾಗಿದೆ. ಈ ವೇಳೆ ಜೈಲಿನಲ್ಲಿದ್ದ ಕನಿಷ್ಠ 118ಜನ ಖೈದಿಗಳು ಎಸ್ಕೇಪ್‌ ಆಗಿದ್ದಾರೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪರಾರಿಯಾದವ್ರ ಹುಡುಕಾಟ ನಡೆಸ್ತಿರೊ ಭದ್ರತಾ ಸಿಬ್ಬಂದಿ ಇಲ್ಲಿವರೆಗೆ 10 ಖೈದಿಗಳನ್ನ ಪುನಃ ಜೈಲಿಗಟ್ಟಿದೆ ಅಂತ ಗೊತ್ತಾಗಿದೆ. ಅಲ್ದೇ ಪರಾರಿಯಾಗಿರೊ ಖ್ಯದಿಗಳ ಚಲನವಲನ ಗಮನಿಸಲು ಮತ್ತು ಅಂತಃ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದ್ರೆ ಮಾಹಿತಿ ನೀಡಿ ಸ್ಥಳೀಯರಿಗೆ ಮಾಹಿತಿ ನೀಡುವಂತೆ ಸರ್ಕಾರ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply