ಕಳೆದ ವರ್ಷ ಹಸಿವಿನಿಂದ ಬಳಲಿದ್ದ 28.2 ಕೋಟಿ ಜನ: ವಿಶ್ವಸಂಸ್ಥೆ ವರದಿ!

masthmagaa.com:

ಜಗತ್ತಲ್ಲಿ ಕಳೆದ ವರ್ಷ ಒಟ್ಟು 59 ದೇಶಗಳಲ್ಲಿ ಸುಮಾರು 282 ಮಿಲಿಯನ್‌ ಜನ ಅಂದ್ರೆ 28.2 ಕೋಟಿ ಜನ ಹಸಿವಿನಿಂದ ಬಳಲಿದ್ದಾರೆ ಅಂತ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ಅದ್ರಲ್ಲೂ ವಿಶ್ವದಲ್ಲೆ ಅತಿ ಹೆಚ್ಚು ಜನ ಹಸಿವಿನಿಂದ ಬಳಲಿರೊ ಪ್ರದೇಶವಾಗಿ ಯುದ್ದದಿಂದ ತತ್ತರಿಸಿರೊ ಗಾಜಾ ಗುರುತಿಸಿಕೊಂಡಿದೆ ಅಂತ ಈ ವಿಶ್ವಸಂಸ್ಥೆಯ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ ಉಲ್ಲೇಖ ಮಾಡಿದೆ. ಇನ್ನು 2022ಕ್ಕೆ ಹೋಲಿಸಿದ್ರೆ 2023ರಲ್ಲಿ 2.4ಕೋಟಿ ಜನ ಹೆಚ್ಚಾಗಿ ಹಸಿವಿನಿಂದ ಬಳಲ್ತಿದ್ದು, ವಿಶೇಷವಾಗಿ ಸೂಡಾನ್‌ ಮತ್ತು ಗಾಜಾ ಪ್ರದೇಶದಲ್ಲೆ ಹೆಚ್ಚಾಗಿ ಆಹಾರದ ಬಿಕ್ಕಟ್ಟು ಎದುರಾಗಿದೆ ಅಂತ ರಿಪೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply