ದೇಶದಲ್ಲಿ ಚುನಾವಣಾ ಬಾಂಡ್‌ ಚರ್ಚೆ! SBIಗೆ ಸುಪ್ರೀಂ ತರಾಟೆ!

masthmagaa.com:

ಲೋಕಸಭೆ ಚುನಾವಣೆಗೆ ಇನ್ನೇನು ನಾಲ್ಕು ವಾರ ಬಾಕಿ ಇದೆ. ಆದ್ರೆ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾತ್ರ ಚುನಾವಣಾ ಬಾಂಡ್‌ಗಳ ವಿಚಾರಣೆ ಇನ್ನೂ ನಡೀತಾನೆ ಇದೆ. ಬಾಂಡ್‌ ವಿಚಾರವಾಗಿ SBIಗೆ ಪದೇ ಪದೇ ಚಾಟಿ ಬೀಸ್ತಿರೋ ಸುಪ್ರೀಂ ಕೋರ್ಟ್‌ ಇದೀಗ ಮತ್ತೊಮ್ಮೆ SBIಯನ್ನ ತರಾಟೆಗೆ ತಗೊಂಡಿದೆ. ನಾವು 2019ರ ನಂತರದ ಬಾಂಡ್‌ಗಳ ಎಲ್ಲಾ ಮಾಹಿತಿಯನ್ನ ಬಹಿರಂಗ ಪಡಿಸೋಕೆ ಆದೇಶಿಸಿದ್ವಿ. ಆದ್ರೆ ಅಲ್ಫಾನ್ಯೂಮರಿಕ್‌ ನಂಬರ್‌ನ್ನ ಯಾಕೆ ಬಹಿರಂಗ ಪಡಿಸಿಲ್ಲ ಅಂತ ಕಿಡಿಕಾರಿದೆ. SBI ನಡವಳಿಕೆ ಸ್ವೀಕಾರ್ರಾಹವಲ್ಲ ಅಂತೇಳಿದೆ. ಅಲ್ಲದೇ ಚುನಾವಣಾ ಬಾಂಡ್‌ಗಳ ಅಲ್ಫಾನ್ಯೂಮರಿಕ್‌ ನಂಬರ್‌ಗಳು ಮತ್ತು ಸೀರಿಯಲ್‌ ನಂಬರ್‌ಗಳನ್ನ ಬಹಿರಂಗಪಡಿಸ್ಬೇಕು. ಜೊತೆಗೆ ಎಲ್ಲಾ ಮಾಹಿತಿ ಕೊಟ್ಟಿದ್ದೀವಿ ಅಂತ ಮಾರ್ಚ್‌ 21ರ ಸಂಜೆ 5 ಗಂಟೆಯೊಳಗೆ ಅಫಿಡವಿಟ್‌ ಸಲ್ಲಿಸಬೇಕು ಅಂತ ಸೂಚಿಸಿದೆ. ಜೊತೆಗೆ ಈ ಮಾಹಿತಿ SBIಯಿಂದ ಸಿಕ್ಕ ತಕ್ಷಣ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪಬ್ಲಿಷ್‌ ಮಾಡುವಂತೆ ಆದೇಶಿಸಿದೆ. CJI ಡಿವೈ ಚಂದ್ರಚೂಡ್‌ ಅವ್ರ ನೇತೃತ್ವದ 5 ಸದಸ್ಯರ ನ್ಯಾಯಪೀಠ ಈ ರೀತಿ ನಿರ್ದೇಶಿಸಿದೆ. ಇನ್ನು ವ್ಯಾಪಾರ ಸಂಘಗಳಾದ FICCI ಮತ್ತು Assocham ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸುವಿಕೆಯನ್ನ ತಡೆಯೋಕೆ ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸಿದ್ವು. ಈ ಮನವಿಯನ್ನ ಸುಪ್ರೀಂ ಕೋರ್ಟ್‌ ರಿಜೆಕ್ಟ್‌ ಮಾಡಿದೆ.

ಮತ್ತೊಂದ್‌ ಕಡೆ ಮಾರ್ಚ್‌ 1, 2018 ರಿಂದ ಏಪ್ರಿಲ್‌ 11, 2019ರ ಮಧ್ಯೆ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡುವಂತೆ ನಾಗರಿಕ ಹಕ್ಕುಗಳ ಟ್ರಸ್ಟ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅವಧಿಯಲ್ಲಿ 4,002 ಕೋಟಿ ರೂಪಾಯಿ ಮೌಲ್ಯದ 9,159 ಚುನಾವಣಾ ಬಾಂಡ್‌ಗಳ ಮಾರಾಟವಾಗಿವೆ ಅಂತ ಹೇಳಿತ್ತು. ಆದ್ರೆ ಸುಪ್ರೀಂ ಕೋರ್ಟ್‌ ಇದಕ್ಕೆ ನಿರಾಕರಿಸಿದೆ. ಈ ಅವಧಿಯಲ್ಲಿ ದಾನಿಗಳು ತಮ್ಮ ಹೆಸರು ಗೌಪ್ಯವಾಗಿರುತ್ತೆ ಅನ್ನೋ ಆಧಾರದ ಮೇಲೆ ಚುನಾವಣಾ ಬಾಂಡ್‌ಗಳನ್ನ ಖರೀದಿಸಿದ್ದಾರೆ. ಹೀಗಾಗಿ ಅದನ್ನ ಬಹಿರಂಗಪಡಿಸೋಕಾಗಲ್ಲ. ಆದ್ರೆ 2019 ಏಪ್ರಿಲ್‌ 12ರ ಮಧ್ಯಂತರ ಆದೇಶದ ನಂತ್ರ ಎಲ್ಲಾ ದಾನಿಗಳಿಗೂ ಈ ಮಾಹಿತಿ ಬಹಿರಂಗ ಆಗಬಹುದು ಅನ್ನೋ ಎಚ್ಚರಿಕೆ ಇತ್ತು. ಹೀಗಾಗಿ ಅದನ್ನ ಡಿಸ್‌ಕ್ಲೋಸ್‌ ಮಾಡಿದ್ರೆ ಸಮಸ್ಯೆ ಇಲ್ಲ. ಅದಕ್ಕಿಂತ ಮುಂಚಿನದ್ದು ಬಹಿರಂಗ ಮಾಡೋಕಾಗಲ್ಲ ಅನ್ನೋ ಅರ್ಥದಲ್ಲಿ ಸುಪ್ರೀಂಕೋರ್ಟ್‌ ಹೇಳಿದೆ.

ಇನ್ನು 2018-19 ಅವಧಿಯಲ್ಲಿ ಅಂದ್ರೆ ಮಧ್ಯಂತರ ವರದಿ ಬಂದಾಗ ಅದಕ್ಕೂ ಮುಂಚಿನ ಬಾಂಡ್‌ ಮಾಹಿತಿಯನ್ನ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಅಂತ ಸುಪ್ರೀಂ ಕೋರ್ಟ್‌ ಹೇಳಿತ್ತು. ಈಗ ಆ ಮಾಹಿತಿಯನ್ನ ಚುನಾವಣಾ ಆಯೋಗ ಬಹಿರಂಗ ಮಾಡಿದೆ. ಗಮನಿಸಿ ಇಲ್ಲಿ, ಬಾಂಡ್‌ ಪರ್ಚೇಸ್‌ ಮಾಡಿರೋ ಮಾಹಿತಿ ಕೊಟ್ಟಿಲ್ಲ. ಕೇವಲ ಪಕ್ಷಗಳು ಅದನ್ನ ಬಹಿರಂಗ ಪಡಿಸಿರೋದು ಮಾತ್ರ ಇದೆ. ಆದ್ರು ಕೆಲ ಪಕ್ಷಗಳು ಯಾವ ಮೂಲದಿಂದ ಬಾಂಡ್‌ ಹಣ ಬಂದಿದೆ ಅಂತ ಇದ್ರಲ್ಲಿ ಹೇಳಿವೆ. ಇದನ್ನ ಸುಪ್ರೀಂ ಕೋರ್ಟ್‌ ಕೇಳಿತ್ತಾ ಅಥವಾ ಇವ್ರೇ ಖುದ್ದಾಗಿ ಹೇಳ್ಕೊಂಡಿದ್ರಾ ಗೊತ್ತಿಲ್ಲ. ಆದ್ರೆ ಚಿತ್ರವಿಚಿತ್ರ ಉತ್ತರಗಳು ಬಂದಿರೋದು ಈಗ ಬಹಿರಂಗ ಆಗಿದೆ. ಇದ್ರಲ್ಲಿ TMCಗೆ 75 ಕೋಟಿ ಮತ್ತು JD(U)ಗೆ 13 ಕೋಟಿ ಬಂದಿರೋದಾಗಿ ಹೇಳಿವೆ. ಆದ್ರೆ ಈ ಹಣವನ್ನ ʻಯಾರೋ ಅಪರಿಚಿತರು ನಮ್ಮ ಕಚೇರಿಗೆ ಬಂದು ಸೀಲ್ಡ್‌ ಕವರ್‌ನ್ನ ಇಟ್ಟು ಹೋಗಿದ್ದಾರೆ. ಆದ್ರಿಂದ ಯಾರು ನಮಗೆ ದೇಣಿಗೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲʼ ಅಂತ ತಮ್ಮ ಅಫಿಡವಿಟ್‌ನಲ್ಲಿ ಹೇಳಿವೆ. ಇನ್ನು ತಮಿಳುನಾಡಿನ DMK ಮಾತ್ರ ತನಗೆ ದೇಣಿಗೆ ಮಾಡಿರೋ ದಾನಿಗಳ ಹೆಸರನ್ನ ಬಹಿರಂಗಪಡಿಸಿದೆ. ಇದ್ರಲ್ಲಿ ಸ್ಯಾಂಟಿಯಾಗೋ ಮಾರ್ಟಿನ್‌ ಅವ್ರ ಫ್ಯೂ ಚರ್‌ ಗೇಮಿಂಗ್‌ ಕಂಪನಿಯಿಂದ 509 ಕೋಟಿ ರೂಪಾಯಿ ಬಂದಿದೆ ಅಂತ DMK ತಿಳಿಸಿದೆ.

-masthmagaa.com

Contact Us for Advertisement

Leave a Reply