ಪಾಕಿಸ್ತಾನ್‌ ಬಕ್ರೀದ್!‌ ATMನಲ್ಲಿ ದುಡ್ಡು ಫುಲ್‌ ಖಾಲಿ

masthmagaa.com:

ಪಾಕಿಸ್ತಾನದಲ್ಲಿ ಈದ್ ಅಲ್-ಅಧಾ ಹಬ್ಬದ ವೇಳೆಯೇ ಅಲ್ಲಿನ ATMಗಳಲ್ಲಿ ಕ್ಯಾಶ್‌ ಖಾಲಿಯಾಗಲು ಶುರುವಾಗಿದ್ದು, ಜನರು ನಗದು ಬಿಕ್ಕಟ್ಟನ್ನು ಫೇಸ್‌ ಮಾಡ್ತಿದ್ದಾರೆ. ಜೂನ್ 29 ರಂದು ಅಂದ್ರೆ ಇಂದಿನಿಂದ ಪಾಕ್‌ನಾದ್ಯಂತ ಈದ್ ಆಚರಿಸಲಾಗುತ್ತಿದ್ದು, ATM ಸೇವೆಗಳು ಸ್ಥಗಿತಗೊಂಡಿವೆ ಅಂತ ಗ್ರಾಹಕರು ದೂರುತ್ತಿದ್ದಾರೆ ಅಂತ ವರದಿಯಾಗಿದೆ. ಹಬ್ಬದ ವೇಳೆ ATMಗಳು ಕೆಟ್ಟು ನಿಂತಿವೆ ಹಲವು ಬಾರಿ ATMಗಳಿಗೆ ಭೇಟಿ ನೀಡಿದ್ರೂ ಹಣವಿಲ್ಲ ಅಂತ ಅಲ್ಲಿನ ಜನರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಅಂದ್ಹಾಗೆ ಸಾಮನ್ಯವಾಗಿ ಈದ್‌ಗೂ ಮುಂಚೆಯೇ ಬಲಿ ಕೊಟ್ಟ ಪ್ರಾಣಿಗಳಿಗೆ ಹಣ ಪಾವತಿಸೋಕೆ ಹೆಚ್ಚಾಗಿ ATM ಗಳಲ್ಲಿ ಹಣ ವಿತ್‌ಡ್ರಾ ಮಾಡೋದ್ರಿಂದ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

masthmagaa.com:

Contact Us for Advertisement

Leave a Reply