ಪಾಕಿಸ್ತಾನ-ಚೀನಾ CPEC ಸಭೆ… ಅಫ್ಘನಿಸ್ತಾನ್ ಬಗ್ಗೆ ಚರ್ಚೆ ಸಾಧ್ಯತೆ

masthmagaa.com:

CPEC ಅಂದ್ರೆ ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಸಂಬಂಧ ಚೀನಾ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವೆ ಮುಂದಿನ ವಾರ ಮಹತ್ವದ ಸಭೆ ನಡೆಯಲಿದೆ. ಸಿಪೆಕ್​​ಗಾಗಿ ನಿರ್ಮಾಣವಾಗಿರೋ ಜಾಯಿಂಟ್ ಕೋ ಆರ್ಡಿನೇಷನ್ ಕಮಿಟಿ ಸಭೆ ಇದಾಗಿದ್ದು, 2020ರಲ್ಲೇ ನಡೆಯಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದಾಗಿ ಈ ಸಭೆಯನ್ನು ಮುಂದೂಡಬೇಕಾಗಿತ್ತು. ಈ ವರ್ಷ ಜುಲೈ ತಿಂಗಳಲ್ಲಿ ಸಭೆ ಮಾಡಣ ಅಂತ ನಿರ್ಧರಿಸಲಾಗಿತ್ತು. ಆದ್ರೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಸ್ಫೋಟ ಸಂಭವಿಸಿ, ಸಿಪೆಕ್ ಯೋಜನೆಯ ಡ್ಯಾಮ್ ಕಾಮಗಾರಿಯಲ್ಲಿ ಭಾಗಿಯಾಗಿದ್ದ 9 ಮಂದಿ ಚೀನೀ ಪ್ರಜೆಗಳು ಸೇರಿದಂತೆ 13 ಮಂದಿ ಪ್ರಾಣ ಕಳ್ಕೊಂಡಿದ್ರು. ಹೀಗಾಗಿ ಮತ್ತೆ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್ 23 ಅಥವಾ 24ರಂದು ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಸಿಪೆಕ್ ಯೋಜನೆಗೆ ಸಂಬಂಧಿಸಿದಂತೆ ಕೃಷಿ, ವಿಜ್ಞಾನ, ತಂತ್ರಜ್ಞಾನ, ಇಂಧನ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಜಾಯಿಂಟ್ ಕೋ ಆರ್ಡಿನೇಷನ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುತ್ತೆ ಅಂತ ಗೊತ್ತಾಗಿದೆ. 2015ರಲ್ಲಿ ಈ ಸಮಿತಿ ಸ್ಥಾಪನೆಯಾಗಿತ್ತು. ಈ ಹಿಂದೆ 2019ರ ನವೆಂಬರ್​ನಲ್ಲಿ ಮೊದಲ ಬಾರಿಗೆ ಈ ಸಭೆ ಆಯೋಜಿಸಲಾಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡಿದ್ದು, ಅದ್ರ ಬೆನ್ನಲ್ಲೇ ಈ ಸಭೆ ಆಯೋಜಿಸಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ ಅಫ್ಘಾನಿಸ್ತಾನದಲ್ಲೂ ಸಿಪೆಕ್ ಯೋಜನೆ ವಿಸ್ತರಿಸಲು ಚೀನಾ ಪ್ಲಾನ್ ಹೊಂದಿದೆ. ಮತ್ತೊಂದ್ಕಡೆ ತಾಲಿಬಾನ್ ಸರ್ಕಾರದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ. ಸೋ ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದ್ರೂ ಅಚ್ಚರಿಯಿಲ್ಲ.

-masthmagaa.com

Contact Us for Advertisement

Leave a Reply