ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಸಿಎಂ ಇಬ್ರಾಹಿಂ ಅಸಮಾಧಾನ! ಹೇಳಿದ್ದೇನು?

masthmagaa.com:

ಲೋಕಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬ ಯವಕ, ತನ್ನಿಷ್ಟದ ಯುವತಿಯೊಬ್ಬಳನ್ನ ಕರೆದುಕೊಂಡು ಹೋಗಿ ತಾಳಿ ಕಟ್ಕೊಂಡು ಬಂದು ಬಿಟ್ರೆ ಈ ಸಮಾಜ ಅದನ್ನ ಮದುವೆ ಅಂತ ಒಪ್ಪಿಕೊಳ್ಳುತ್ತಾ? ಅಂತ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕುರಿತು ಪ್ರಶ್ನಿಸಿದ್ದಾರೆ. ಮೈತ್ರಿ ಮಾತುಕತೆಗಾಗಿ ಕುಮಾರಸ್ವಾಮಿಯವರು ದೆಹಲಿಗೆ ಹೋಗಿ ಬಂದಿದ್ದಾರೆ. ಆದರೆ, ಪಕ್ಷದ ರಾಜ್ಯಾಧ್ಯಕ್ಷನಾದ ನನಗೆ ಅವರು ಒಂದು ಮಾತನ್ನೂ ಹೇಳಿಲ್ಲ. ನನಗೆ ಒಂದು ಮಾತು ಹೇಳಿದ್ದರೆ.. ನಾನು ಸಹ ಹೋಗಿ ಬನ್ನಿ ಅಂತ ಹೇಳುತ್ತಿದ್ದೆ. ಆದರೆ, ಅವರು ನನ್ನಿಂದಲೂ ಇದನ್ನು ಮುಚ್ಚಿಟ್ಟಿದ್ದರು. ಮೈತ್ರಿ ಯಾವತ್ತೂ ಪಕ್ಷ ಮತ್ತು ಪಕ್ಷದ ನಡುವೆ ಆಗಬೇಕೇ ಹೊರತು, ಒಂದಿಬ್ಬರು ನಾಯಕರ ನಡುವೆ ಆಗಬಾರದು ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಶೇ. 20ರಷ್ಟು ಮುಸ್ಲಿಂರ ಮತಗಳು ಬಂದಿವೆ. ಮುಸ್ಲಿಂರ ಬೆಂಬಲ ಸಿಗದೇ ಇದ್ದಿದ್ದರೆ ಜೆಡಿಎಸ್ ಶಾಸಕರ ಸಂಖ್ಯೆ 2 ಅಥವಾ 3ಕ್ಕೆ ಇಳಿಯುತ್ತಿತ್ತು ಎಂದಿದ್ದಾರೆ. ಜೊತೆಗೆ ಜೆಡಿಎಸ್-ಬಿಜೆಪಿ ಮೈತ್ರಿಗೆ ನನ್ನ ವಿರೋಧವಿದೆ. ಪಕ್ಷದ ಹಲವು ಶಾಸಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜೆಡಿಎಸ್ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ. ಕುಮಾರಸ್ವಾಮಿಯೇ ನಮ್ಮ ಮನೆ ಬಳಿ ಎಷ್ಟು ಬಾರಿ ಬಂದಿದ್ದರು ಗೊತ್ತಾ?. ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಅಂತ ಇಬ್ರಾಹಿಂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply