886 ಕೋಟಿ ರೂಪಾಯಿ ಮೊತ್ತದ ಹೆರಾಯಿನ್ ಜಪ್ತಿ!

masthmagaa.com:

ಮಹಾರಾಷ್ಟ್ರದ ಜವಾಹರ್ ಲಾಲ್​ ನೆಹರು ಬಂದರಿನಲ್ಲಿ 879 ಕೋಟಿ ರೂಪಾಯಿ ಮೌಲ್ಯದ 300 ಕೆಜಿಯಷ್ಟು ಹೆರಾಯಿನ್​​​ನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಅಫ್ಗಾನಿಸ್ತಾನದಿಂದ ಇರಾನ್ ಮೂಲಕ ಈ ಹೆರಾಯಿನ್​ನ್ನು ತರಲಾಗಿತ್ತು. ಜಿಪ್ಸಂ ಸ್ಟೋನ್ ಮತ್ತು ಟಾಲ್ಕಂ ಪೌಡರ್ ಅಂತ ಹೇಳಿ ಪರ್ಮಿಷನ್ ಪಡೆದು, ಪ್ರಬ್​ಜೋತ್ ಸಿಂಗ್ ಅನ್ನೋರ ಹೆಸರಿಗೆ ಕಳುಹಿಸಲಾಗಿತ್ತು. ಇಲ್ಲಿಂದ ಈ ಹೆರಾಯಿನ್​​ನ್ನು ಪಂಜಾಬ್​​ಗೆ ಕಳುಹಿಸಲು ಪ್ಲಾನ್ ಮಾಡಲಾಗಿತ್ತು ಅಂತ ಡಿಆರ್​ಐ ಅಂದ್ರೆ ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದಿಂದ ಬಂದಿದ್ದ 1000 ಕೋಟಿ ರೂಪಾಯಿ ಮೌಲ್ಯದ 191 ಕೆಜಿಯಷ್ಟು ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಅದನ್ನು ಆಯುರ್ವೇದಿಕ್ ಔಷಧಿ ಅಂತ ಹೇಳಿ ಸಾಗಾಟಕ್ಕೆ ಪರ್ಮಿಷನ್ ಪಡೆಯಲಾಗಿತ್ತು. ಮತ್ತೊಂದ್ಕಡೆ ದೆಹಲಿ ಏರ್​ಪೋರ್ಟ್​​ನಲ್ಲಿ ಬಳೆಗಳ ಒಳಗೆ ಇಟ್ಟು ಸ್ಮಗಲ್ ಮಾಡುತ್ತಿದ್ದ ಏಳೂವರೆ ಕೋಟಿ ರೂಪಾಯಿ ಮೌಲ್ಯದ 18 ಕೆಜಿಯಷ್ಟು ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.

-masthmagaa.com

Contact Us for Advertisement

Leave a Reply