ಹೆಡ್‌ಫೋನ್‌ ಬಳಸಿದ್ರೆ ಕಿವುಡರಾಗ್ತೀರ ಹುಷಾರ್‌! WHO ಎಚ್ಚರಿಕೆ

masthmagaa.com:

ಈಗಿನ ಕಾಲಮಾನದಲ್ಲಿ ಜನರು ಮೊಬೈಲ್‌ಗಳಿಗೆ ಅಷ್ಟೇ ಅಲ್ಲ. ಹೆಡ್‌ಫೋನ್‌ಗಳಿಗೂ ಅಡಿಕ್ಟ್‌ ಆಗಿದಾರೆ. ಯಾವಾಗ್ಲೂ ಕಿವಿಯಲ್ಲಿ ಏರ್ ಬಡ್ಸ್‌ ಅಥ್ವಾ ಕುತ್ತಿಗೆಯಲ್ಲಿ ನೆಕ್‌ ಬ್ಯಾಂಡ್‌ ಇರುತ್ತೆ. ನೀವು ಕೂಡ ವಾಕ್‌ ಮಾಡುವಾಗ, ಪ್ರಯಾಣಿಸುವಾಗ, ಕಾಲ್‌ನಲ್ಲಿ ಮಾತಾಡುವಾಗ‌ ಅತಿಯಾಗಿ ಏರ್‌ಫೋನ್‌ಗಳನ್ನ ಬಳಸ್ತೀರಾ. ಹಾಗಿದ್ರೆ ಇಲ್ಲಿ ಕೇಳಿ. ಇದ್ರಿಂದ ನಿಮ್ಮ ಕಿವಿಗಳು ಕೇಳಿಸದೆ ಹೋಗ್ಬೋದು, ಸ್ವಲ್ಪ ಹುಷಾರಾಗಿರಿ. ಜಗತ್ತಿನಾದ್ಯಾಂತ ಹೆಡ್‌ಫೋನ್‌ ಬಳಕೆ ಮಾಡ್ತಿರೋ ಸುಮಾರು 100 ಕೋಟಿ ಯುವ ಜನಾಂಗ ಕಿವುಡರಾಗೋ ಸಾಧ್ಯತೆ ಹೆಚ್ಚಿದೆ ಅಂತ ಹೊಸ ಸ್ಟಡಿ ಒಂದ್ರಿಂದ ಗೊತ್ತಾಗಿದೆ. ಯುವ ಜನಾಂಗ ತಮ್ಮ ಈ ಹೆಡ್‌ಫೋನ್‌ ಹ್ಯಾಬಿಟ್‌ನಿಂದ ಎಚ್ಚರವಾಗಿರಬೇಕು ಅಂತ WHO ಕೂಡ ವಾರ್ನಿಂಗ್ ನೀಡಿದೆ. 33 ಅಧ್ಯಯನಗಳ ಡೇಟಾದಿಂದ ತಿಳಿದು ಬಂದಿರೊ ಈ ಮಾಹಿತಿಯನ್ನ BMJ ಗ್ಲೋಬಲ್‌ ಹೆಲ್ತ್‌ ಜರ್ನಲ್‌ನಲ್ಲಿ ಪಬ್ಲಿಷ್‌ ಮಾಡಲಾಗಿದೆ. ಕಳೆದ 20 ವರ್ಷಗಳಿಂದ 12 ರಿಂದ 34 ವಯಸ್ಸಿನ ಸುಮಾರು 19,000 ಕ್ಕಿಂತ ಅಧಿಕ ಜನರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದ್ರಲ್ಲಿ ಹೆಡ್‌ಫೋನ್‌ ಬಳಕೆ ಮಾಡೋ 24% ಯುವಕರು ಅನ್‌ಸೇಫ್‌ ಇದಾರೆ. ಜೊತೆಗೆ ನೈಟ್‌ಕ್ಲಬ್‌ ಮತ್ತು ಮ್ಯೂಸಿಕ್‌ ಕಾನ್ಸೆರ್ಟ್‌ಗಳಲ್ಲಿ ಭಾಗವಹಿಸೋ 48% ಜನರು ಶ್ರವಣ ತೊಂದ್ರೆಗೆ ಒಳಗಾಗೋ ಸಾಧ್ಯತೆ ಹೆಚ್ಚು. ಒಟ್ಟಾರೆಯಾಗಿ 6.7 ಲಕ್ಷದಿಂದ 1.35 ಕೋಟಿ ಜನ ಶ್ರವಣ ದೋಷದ ಅಪಾಯದಲ್ಲಿದ್ದಾರೆ ಅಂತ ಸ್ಟಡಿಯಿಂದ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply