ಡಾಲಿಗೆ 1ಕೋಟಿಯ ಕಾರ್‌ ಗಿಫ್ಟ್‌

masthmagaa.com:

ನಟ ಡಾಲಿ ಧನಂಜಯ್ ಅವರ 25ನೇ ಚಿತ್ರ ‘ಹೊಯ್ಸಳ’ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಡಾಲಿ ಧನಂಜಯ್ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ನಿರ್ಮಿಸಿರುವ ಕೆ ಆರ್ ಜಿ ಸ್ಟುಡಿಯೋಸ್ ನ ಯೋಗಿ ರಾಜ್ ಮತ್ತು ಕಾರ್ತಿಕ್ ಗೌಡ ಧನಂಜಯ್ ಗೆ 1 ಕೋಟಿ ರೂಪಾಯಿಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ಶೇರ್ ಮಾಡುವ ಮೂಲಕ ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಧನಂಜಯ್‌ಗೆ ಟೊಯೊಟಾ ವೆಲ್‌ಫೈರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಆನ್ ರೋಡ್ ಬೆಲೆ 1.19 ಕೋಟಿ ರೂ. ಧನಂಜಯ್ ಕಾರಿನೊಂದಿಗೆ ನಿಂತಿರುವ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿ “25 ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ” ಎಂದು ಧನಂಜಯ್ ಬರೆದಿದ್ದಾರೆ.ಅಲ್ಲದೇ ‘ನನ್ನ ನಿರ್ಮಾಪಕರು ಮತ್ತು ಅಭಿಮಾನಿಗಳ ಕೊಡುಗೆ’ ಎಂದೂ ಸಹ ಧನಂಜಯ್ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿ, ಧನಂಜಯ್‌ ಅವರನ್ನು ಅಭಿನಂದಿಸಿದರು.

-masthmagaa.com

Contact Us for Advertisement

Leave a Reply