ಎಚ್ಚರ ಎಚ್ಚರ.. 5 ಜನರಲ್ಲಿ ಒಬ್ಬರಿಗೆ ಕೊರೋನಾ! ಮಕ್ಕಳು, ಮಹಿಳೆಯರೇ ಹೆಚ್ಚು!

masthmagaa.com:

ದೇಶದಲ್ಲಿ ಕೊರೋನಾ ಹಾವಳಿಯೇನೋ ಕಮ್ಮಿಯಾಗಿದೆ. ಆದ್ರೆ ಪ್ರತಿ 5 ಭಾರತೀಯರಲ್ಲಿ ಒಬ್ಬರಿಗೆ ಈಗಾಗಲೇ ಕೊರೋನಾ ಬಂದು ಹೋಗಿದೆ ಅಂತ ಐಸಿಎಂಆರ್​ ನಡೆಸಿದ 3ನೇ ಸೀರೋಲಾಜಿಕಲ್ ಸರ್ವೆ ಹೇಳಿದೆ. ಡಿಸೆಂಬರ್​ 17ರಿಂದ ಜನವರಿ 8ರವರೆಗೆ ಈ ಸರ್ವೆ ನಡೆಸಲಾಗಿತ್ತು. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ 21.4% ಜನರ ದೇಹದಲ್ಲಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ರೂಪುಗೊಂಡಿತ್ತು. ಕೊರೋನಾ ವಿರುದ್ಧದ ರೋಗ ನಿರೋಧಕ ಶಕ್ತಿ ಅವರ ದೇಹದಲ್ಲಿದೆ ಅಂದ್ರೆ ಅವರಿಗೆ ಕೊರೋನಾ ಬಂದು ಹೋಗಿದೆ ಅಂತರ್ಥ. 21.4% ಅಂದ್ರೆ 100 ಜನರಲ್ಲಿ 21 ಜನರಿಗೆ ಅನ್ಬೋದು. ಇನ್ನೂ ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ 5 ಜನರಲ್ಲಿ ಒಬ್ಬರಿಗೆ ಅನ್ಬೋದು. ಹಾಗಿದ್ರೆ ಯಾವ್ಯಾವ ವರ್ಗದ ಜನರಲ್ಲಿ, ಎಷ್ಟು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಅಂತ ನೋಡೋದಾದ್ರೆ,

18 ವರ್ಷ ಮೇಲ್ಪಟ್ಟವರು: 21.4% (5 ಜನರಲ್ಲಿ ಒಬ್ಬರು)

10ರಿಂದ 18 ವರ್ಷದ ಮಕ್ಕಳು: 25.3% (4 ಜನರಲ್ಲಿ ಒಬ್ಬರು)

ಪುರುಷರು: 20.3% (5 ಜನರಲ್ಲಿ ಒಬ್ಬರು)

ಮಹಿಳೆಯರು: 22.7% (5 ಜನರಲ್ಲಿ ಒಬ್ಬರು)

ಆರೋಗ್ಯ ಕಾರ್ಯಕರ್ತರು: 25.7% (4 ಜನರಲ್ಲಿ ಒಬ್ಬರು)

 ಗ್ರಾಮೀಣ ಪ್ರದೇಶ: 19.1% (5 ಜನರಲ್ಲಿ ಒಬ್ಬರು)

ನಗರ ಪ್ರದೇಶದ ಸ್ಲಮ್​​: 31.7% (3 ಜನರಲ್ಲಿ ಒಬ್ಬರು)

ಸ್ಲಮ್​ ಹೊರತುಪಡಿಸಿದ ನಗರ ಪ್ರದೇಶ: 26.2% (4 ಜನರಲ್ಲಿ ಒಬ್ಬರು)

2020ರ ಏಪ್ರಿಲ್​​ನಲ್ಲಿ ಐಸಿಎಂಆರ್ ನಡೆಸಿದ ಮೊದಲ ಸೀರೋ ಸರ್ವೆಯಲ್ಲಿ 0.7% ಮತ್ತು ಆಗಸ್ಟ್​ನಲ್ಲಿ ನಡೆಸಿದ 2ನೇ ಸೀರೋ ಸರ್ವೆಯಲ್ಲಿ 7.1% ಜನರಿಗೆ ಕೊರೋನಾ ಬಂದು ಹೋಗಿತ್ತು ಅಂತ ಗೊತ್ತಾಗಿತ್ತು. ಈಗ ಅದರ ಪ್ರಮಾಣ 21%ಗೆ ಏರಿಕೆ ಆಗಿದೆ. ಈ ಬಾರಿಯ ಸರ್ವೆಯಲ್ಲಿ ದೆಹಲಿಯನ್ನ ಸೇರಿಸಿಕೊಂಡಿರಲಿಲ್ಲ. ಆದ್ರೆ ದೆಹಲಿ ಸರ್ಕಾರ ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ ಬರೋಬ್ಬರಿ 56% ಜನರಲ್ಲಿ ಆಂಟಿಬಾಡೀಸ್ ರೂಪುಗೊಂಡಿರೋದು ಪತ್ತೆಯಾಗಿತ್ತು. 50 ಪರ್ಸೆಂಟ್​ ಅಂದ್ರೆ ಪ್ರತಿ ಇಬ್ಬರಲ್ಲಿ ಒಬ್ಬರು ಕೊರೋನಾ ಸೋಂಕು ಬಂದೋಗಿದೆ ಅಂತ.

-masthmagaa.com

Contact Us for Advertisement

Leave a Reply