1 ರೂಪಾಯಿಗೆ 1 ಲೀಟರ್‌ ಪೆಟ್ರೋಲ್‌! ಎಲ್ಲಿ? ಯಾಕೆ?

masthmagaa.com:

1ರೂಪಾಯಿಗೆ 1ಲೀಟರ್‌ ಪೆಟ್ರೋಲ್‌ ನೀಡೋ ಮೂಲಕ ಹೆಚ್ಚಾಗ್ತಿರೋ ಪೆಟ್ರೋಲ್‌ ಬೆಲೆ ವಿರುದ್ದ ಮಹಾರಾಷ್ಟ್ರದಲ್ಲಿ ವಿನೂತನವಾಗಿ ಪ್ರತಿಭಟಿಸಲಾಗಿದೆ. ಸೊಲ್ಹಾಪುರದ ಅಂಬೇಡ್ಕರ್‌ ಸ್ಟೂಡೆಂಟ್‌ ಹಾಗು ಯೂತ್‌ ಪ್ಯಾಂಥರ್ಸ್‌ ಅನ್ನೊ ಸಂಘಟನೆಗಳು ಅಂಬೇಡ್ಕರ್‌ರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ವು. ಈ ವೇಳೆ ಪೆಟ್ರೋಲ್‌ ಬಂಕ್‌ಗಳಿಗೆ ಬಂದ ಸುಮಾರು ಐನೂರು ಜನರಿಗೆ ತಲಾ 1ಲೀಟರ್‌ ಪೆಟ್ರೋಲ್‌ ನೀಡೋ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply