ಬಾಲ್ಯದ ಗೆಳೆಯನ ಜೊತೆ ಮದುವೆಯಾದ 10 ವರ್ಷದ ಬಾಲಕಿ! ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗಳ ಕೊನೆ ಆಸೆ ಈಡೇರಿಸಿದ ಪೋಷಕರು!

masthmagaa.com:

ಲುಕೇಮಿಯಾ ಅಥ್ವಾ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 10 ವರ್ಷದ ಹುಡುಗಿಯೊಬ್ಬಳು ಸಾಯುವುದಕ್ಕೂ ಮುನ್ನ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಎಮ್ಮಾ ಎಡ್ವರ್ಡ್ಸ್ ಕಳೆದ ವರ್ಷ ಏಪ್ರಿಲ್‌ನಲ್ಲಿ ʻಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ’ಕ್ಕೆ ತುತ್ತಾಗಿದ್ದಳು. ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಯಾವ ಚಿಕಿತ್ಸೆಯಿಂದಲೂ ಮಗಳ ಕಾಯಿಲೆ ವಾಸಿಯಾಗಲಿಲ್ಲ. ಒಂದು ವಾರ ಅಥವಾ ಅದಕ್ಕೂ ಮೊದಲು ಪ್ರಾಣ ಹೋಗಬಹುದು ಅಂತ ವೈದ್ಯರು ಹೇಳಿದ್ದರು. ಈ ವಿಷಯ ಕೇಳಿ ನಮಗೆ ದಿಕ್ಕು ತೋಚದಂತಾಗಿತ್ತು. ಆದ್ರೆ ಅದ್ಧೂರಿ ಮದುವೆಯಾಗಬೇಕು ಅನ್ನೋದು ಅವಳ ಕನಸಾಗಿತ್ತು. ಹೀಗಾಗಿ ಅದನ್ನ ನೆರವೆರಿಸಿದ್ದೇವೆ ಅಂತ ಎಮ್ಮಾ ತಾಯಿ ಅಲೀನಾ ಹೇಳಿದ್ದಾರೆ. ಇನ್ನು ಮಗಳ ಆಸೆಯಂತೆಯೇ ಅವಳ ಗೆಳೆಯ ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ಜೊತೆ ಜೂನ್ 29ರಂದು ಮದುವೆ ಮಾಡಿಸಿದೆವು. ಮದುವೆಯಾಗಿ 12 ದಿನಗಳ ಬಳಿಕ ಎಮ್ಮಾ ಸಾವನ್ನಪ್ಪಿದಳು ಅಂತ ಅಲೀನಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply