ಚೀನಾ ಗಡಿಗೆ ಹೆಚ್ಚುವರಿಯಾಗಿ 10 ಸಾವಿರ ಸೈನಿಕರ ನಿಯೋಜನೆ!

masthmagaa.com:

ಚುನಾವಣೆ ಹತ್ರ ಬರ್ತಿರೋ ಟೈಮಲ್ಲೇ ಚೀನಾ ಬಾರ್ಡರ್‌ಗೆ ಹೆಚ್ಚುವರಿಯಾಗಿ ಬರೋಬ್ಬರಿ 10 ಸಾವಿರ ಸೈನಿಕರನ್ನ ನಿಯೋಜಿಸೋಕೆ ಇಂಡಿಯನ್‌ ಆರ್ಮಿ ಮುಂದಾಗಿದೆ. ಪಾಕ್‌ನಲ್ಲಿ ಹೊಸ ಸರ್ಕಾರ ಬಂದಿರೋ ಟೈಮಲ್ಲೇ ಪಾಕ್‌ ಬಾರ್ಡರ್‌ನಲ್ಲಿದ್ದ ಕೆಲವು ಸೈನಿಕರನ್ನೂ ಚೀನಾ ಬಾರ್ಡರ್‌ಗೆ ಕಳಿಸಲಾಗಿದೆ. ಮುಖ್ಯವಾಗಿ ಉತ್ತರಾಖಂಡ್‌ ಹಾಗೂ ಹಿಮಾಚಲ ಪ್ರದೇಶದ ಟಿಬೆಟ್‌ ಬಾರ್ಡರ್‌ಗೆ, ಅಲ್ಲಿನ ಹೊಸ ಫೈಟಿಂಗ್‌ ಕಮ್ಯಾಂಡ್‌ಗೆ ಈ ಸೈನಿಕರನ್ನ ನಿಯೋಜಿಸಲಾಗ್ತಿದೆ. ಆದ್ರೆ ಈ ಬಗ್ಗೆ ಇಂಡಿಯನ್‌ ಆರ್ಮಿಯಾಗ್ಲಿ ರಕ್ಷಣಾ ಸಚಿವಾಲಯ ಆಗ್ಲಿ ಮಾತನಾಡೋಕೆ ನಿರಾಕರಿಸಿದೆ. ತಮ್ಮ ಹೆಸರನ್ನ ಬಹರಂಗಪಡಿಸೋಕೆ ಇಷ್ಟಪಡದ ಸೀನಿಯರ್‌ ಅಧಿಕಾರಿಯೊಬ್ರು ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಇಲ್ಲಿನ ಸುಮಾರು 532 ಕಿಲೋಮೀಟರ್‌ ಬಾರ್ಡರ್‌ನಲ್ಲಿ ಈ ಸೈನಿಕರು ನಿಯೋಜನೆಗೊಳ್ತಾರೆ ಅಂದಿದ್ದಾರೆ. ಇನ್ನು ಸದ್ಯ ಹಿಮಾಲಯದಲ್ಲಿ ತೀವ್ರ ಹಿಮಪಾತ ಆಗ್ತಿದ್ದು ಸೈನಿಕರಿಗೆ ಬಹಳಷ್ಟು ತೊಂದರೆ ಆಗ್ಬೋದು ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply